ಈ ದಿಟ್ಟೆಯ ಹೋರಾಟ ಇತರರಿಗೆ ಮಾದರಿ..!

1
72

ಈ ದಿಟ್ಟೆಯ ಹೋರಾಟ ಇತರರಿಗೆ ಮಾದರಿ..!

2014ರ ಯೂನಿಸೆಫ್ ವರದಿ ಪ್ರಕಾರ, ಭಾರತದಲ್ಲಿ 18 ವರ್ಷ ತುಂಬುವ ಮೊದಲೇ ವಿವಾಹ ಆಗುವ ಬಾಲಕಿಯರ ಸಂಖ್ಯೆ ಶೇಕಡ 47. ! ಹಾಗಾಗಿ, ಬಾಲ್ಯ ಈ ಮಕ್ಕಳಿಗೆ ವರವಾಗುವ ಬದಲು ಶಾಪವಾಗಿ ಕಾಡುತ್ತಿದೆ. ಇದರ ವಿರುದ್ಧ ರಾಜಸ್ಥಾನದ ಮನೋವೈದ್ಯೆ ಡಾ. ಕೀರ್ತಿ ಭಾರ್ತಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲ, ಅಪ್ರಾಪ್ತ ವಯಸ್ಸಲ್ಲೇ ಹೆಣ್ಣು ಮಕ್ಕಳು ಮದುವೆ ಆಗುವುದರಿಂದ ಅವರ ಶಿಕ್ಷಣ, ಕಲಿಕೆ ಎಲ್ಲವೂ ಮೊಟಕುಗೊಳ್ಳುತ್ತದೆ. ಮತ್ತೆ ಆ ಮುಗ್ಧ ಹೆಣ್ಣುಮಕ್ಕಳ ದುಸ್ಥಿತಿಗೆ ಕಾರಣವಾಗಿದೆ ಎಂದು ದೇಶದೆಲ್ಲೆಡೆ ಜಾಗೃತಿ ಮೂಡಿಸುವ ಕೆಲಸವನ್ನು ಡಾ. ಕೀರ್ತಿಭಾರ್ತಿಯವರು ಮಾಡಿಕೊಂಡು ಬರುತ್ತಿದ್ದಾರೆ.
ಈಗ್ಗೆ ಐದು ವರ್ಷಗಳ ಹಿಂದೆ ಅಂದರೆ, 2012ರಲ್ಲಿ ಓರ್ವ ಬಾಲಕಿಯ ವಿವಾಹ ತಡೆದು, ಆಕೆಯ ಓದಿನ ಕನಸಿಗೆ ನೆರವಾದವರು ರಾಜಸ್ಥಾನದ ಜೈಪುರದ ಈ ಕೀರ್ತಿ ಭಾರ್ತಿ ಯವರು. ಈ ಪ್ರಸಂಗ ಅವರನ್ನು ಬಹುವಾಗಿ ಪ್ರಭಾವಿಸಿ ಬಾಲ್ಯ ವಿವಾಹ ವಿರುದ್ಧ ಹೋರಾಟಕ್ಕೆ ಇಳಿಸಿತು.
ಡಾ. ಕೀರ್ತಿ ಭಾರ್ತಿಬಾಲ್ಯವಿವಾಹ ಮಕ್ಕಳ ಕನಸುಗಳನ್ನೆಲ್ಲ ಕಮರಿಸಿಬಿಡುತ್ತದೆಂಬುದು ಮನದಟ್ಟಾಗುತ್ತಲೇ ಮಕ್ಕಳ ಬಾಲ್ಯ ರಕ್ಷಿಸುವುದೇ ಜೀವನಮಂತ್ರವಾಯಿತು. ವೃತ್ತಿಯಲ್ಲಿ ಆಪ್ತ ಸಮಾಲೋಚಕಿಯಾಗಿರುವ ಕೀರ್ತಿ 2012ರಲ್ಲಿ ‘ಸಾರಥಿ’ ಎಂಬ ಟ್ರಸ್ಟ್ ಆರಂಭಿಸಿ, ಬಾಲ್ಯವಿವಾಹದ ವಿರುದ್ಧ ಹೋರಾಟ ಆರಂಭಿಸಿದರು.


ಡಾ. ಕೀರ್ತಿ ಭಾರ್ತಿಯವರು, ಬಾಲ್ಯವಿವಾಹದಿಂದ ರಕ್ಷಿಸಿದ ಬಾಲಕಿಯರ ಪೋಷಣೆ ಹೇಗೆ ಎಂಬ ಪ್ರಶ್ನೆ ಉದ್ಭವವಾದಾಗ ಅದಕ್ಕೆ ಉತ್ತರವಾಗಿ ಆಶ್ರಯ ಮನೆಗಳನ್ನು ತೆರೆದರು. ಉಚಿತ  ಶಿಕ್ಷಣ, ವಸತಿ ಜತೆಗೆ ಬದುಕನ್ನು ಸ್ವಾವಲಂಬಿಯಾಗಿಸಲು ಉದ್ಯೋಗ ತರಬೇತಿಯನ್ನೂ ‘ಸಾರಥಿ’ ಯಲ್ಲಿ ನೀಡಲಾಗುತ್ತಿದೆ.
ಇನ್ನು ಈವರೆಗೆ 900 ಕ್ಕಿಂತಲೂ ಹೆಚ್ಚು ಬಾಲಕಿಯರನ್ನು ರಕ್ಷಿಸಿರುವ ಡಾ . ಕೀರ್ತಿ ಅವರಿಗೆಲ್ಲ ಆಶ್ರಯ ನೀಡುವುದರ ಜತೆಗೆ ಹೊಸ ಬದುಕು ಕಲ್ಪಿಸಿದ್ದಾರೆ. ಆದರೆ, ಪ್ರತಿ ಬಾರಿ ಇಂಥ ಮದುವೆ ತಡೆದಾಗಲೂ ಬಾಲಕಿಯರ ಪಾಲಕರಿಂದ. , ರೌಡಿಗಳಿಂದ, ರಾಜಕಾರಣಿಗಳಿಂದಲೂ ಜೀವ ಬೆದರಿಕೆ ಬಂದಿದ್ದುಂಟು. ಆದರೆ, ಕೀರ್ತಿ ಇದಾವುದಕ್ಕೂ ತಲೆಕೆಡಿಸಿಕೊಂಡಿಲ್ಲ .
ಡಾ. ಕೀರ್ತಿ ಭಾರ್ತಿಯವರು ಜೀವ ಹೋದರೂ ಸರಿಯೇ, ಬಾಲಕಿಯರ ಬದುಕು ಹಾಳಾಗಲು ಬಿಡುವುದಿಲ್ಲ ಎಂದು ನಿಶ್ಚಯಿಸಿ ಹೋರಾಟಕ್ಕಿಳಿದಿದ್ದಾರೆ.

 

ಇಂತಹ ಮಕ್ಕಳ ಮಧ್ಯೆಯೇ ಇದ್ದು ಕೆಲಸ ಮಾಡುತ್ತ ಬಾಲಕಿಯರ ಮೊಗದಲ್ಲಿ ನಗು ಮೂಡಿಸುತ್ತಿದ್ದಾರೆ.
ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸುತ್ತಿರುವ ಇವರೀಗ ದೇಶದೆಲ್ಲೆಡೆ ಜನರಿಗೆ ಗೊತ್ತು. ಸರ್ಕಾರ, ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಶಭಾಷ್ ಗಿರಿ ಕೂಡ ಕೊಟ್ಟಿವೆ. ಈ ದಿಟ್ಟೆಯ ಹೋರಾಟ ಇತರೆ ಯುವತಿಯರಿಗೆ ಮಾದರಿ ಅಲ್ಲವೇ?

ಬೈ ಎಲೆಕ್ಷನ್ ಮುಗಿದ ಬೆನ್ನಲ್ಲೇ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಅರ್ಥಾತ್ ಲೋಕಲ್‌ ಫೈಟ್‌ಗೆ ದಿನಾಂಕ ನಿಗದಿಯಾಗಿದೆ.  ಡಿಸೆಂಬರ್‌ನಲ್ಲಿ 2 ಹಂತದಲ್ಲಿ ಗ್ರಾಮಪಂಚಾಯತ್‌ ಚುನಾವಣೆ ನಡೆಯಲಿದ್ದು, ಡಿ. 30 ರಂದು ಮತ ಎಣಿಕೆ ನಡೆಯಲಿದೆ.
ರಾಜ್ಯದ 6,006 ಗ್ರಾಮ ಪಂಚಾಯತಿಗಳ ಪೈಕಿ ಒಟ್ಟು 5,762 ಗ್ರಾಮ ಪಂಚಾಯತ್‌ಗಳ ಒಟ್ಟು 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾ.ಪಂ ಚುನಾವಣೆಗೆ ಒಟ್ಟು 11,949 ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.
ಒಟ್ಟು ಮತದಾರರ ಸಂಖ್ಯೆ 2,96,15,048 ಇದ್ದು, ಒಟ್ಟು 45,125 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತಗಟ್ಟೆಗೆ ಬರುವ ಮತದಾರರಿಗೆ ಮಾಸ್ಕ್ ಧರಿಸುವುದನ್ನು  ಕಡ್ಡಾಯ ಮಾಡಲಾಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನೂಕು ನುಗ್ಗಲು ತಪ್ಪಿಸಲು ಒಂದು ಮತಗಟ್ಟೆಯಲ್ಲಿ ಗರಿಷ್ಠ ಒಂದು ಸಾವಿರ ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಯಾವ ದಿನ ಏನು?
ಮೊದಲ ಹಂತದ ‌ಮತದಾನ ಡಿ. 22ರಂದು ನಡೆಯಲಿದ್ದು ಅಧಿಸೂಚನೆ  ಡಿ. 7 ರಂದು ಪ್ರಕಟವಾಗಲಿದೆ. ಡಿ.11ರಂದು ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು. ಡಿ.14ರಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ.
ಎರಡನೇ ಹಂತದ ಚುನಾವಣೆ  ಡಿ.27 ರಂದು ನಡೆಯಲಿದ್ದು ಡಿ.11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಡಿ. 19 ರಂದು ನಾಮಪತ್ರ ಪಡೆಯಲು ಕೊನೆ ದಿನಾಂಕವಾಗಿದೆ.
ಬೀದರ್ ನಲ್ಲಿ ಮಾತ್ರ ಇವಿಎಂ ಮೂಲಕ ಮತದಾನ ನಡೆದರೆ,  ಬೇರೆ ಜಿಲ್ಲೆಗಳಲ್ಲಿ  ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ.

ಕಮ್ಮಿ ಕೆಲಸ ಮಾಡಿ ಜಾಸ್ತಿ ಸಂಬಳ ಪಡಿಬೇಕೆ?

ಕೆಲಸ ಕೆಲಸ ಕೆಲಸ.. ಮೂರು ಹೊತ್ತೂ ಕೆಲಸ. ರಾತ್ರಿಯಾದರೂ, ಬೆಳಕು ಬಂದರೂ ಕೆಲಸ.. ಈ ಮಾತು ನಮ್ಮ ದೇಶದಲ್ಲಿ ಕಾಮನ್. ಈ ಕೆಲಸ ಎಷ್ಟೊಂದು ಬೇಸರವಾಗಿರುತ್ತದೆ ಎಂದರೆ, ಕೆಲ ನಿರ್ದೇಶಕರು ಇಂಥದ್ದೇ ಸ್ಟೋರಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಅಚ್ಚರಿಯೆಂಬಂತೆ ಅವು ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿವೆ. ಆದರೆ ಕೆಲವು ದೇಶಗಳಲ್ಲಿ ಮಾತ್ರ ಕೆಲಸ ಎಂದರೆ ಬೇಸರವಿಲ್ಲದೇ ಮಾಡುವ ಮಂದಿ ತುಂಬಾನೇ ಇದ್ದಾರೆ. ಆ ದೇಶಗಳಲ್ಲಿ ಕೆಲಸದ ಬಗ್ಗೆ ಇರುವ ಅತ್ಯಂತ ಸುಲಭ ನಿಬಂಧನೆಗಳೇ ಅದಕ್ಕೆ ಕಾರಣ. ಇಷ್ಟಕ್ಕೂ ಯಾವ್ಯಾವ ದೇಶದಲ್ಲಿ ಜನರು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ ಗೊತ್ತಾ..? ನೀವೇ ನೋಡಿ.

1. ನೆದರ್ ಲ್ಯಾಂಡ್

Netherlands_it-is-easy

ಒಂದು ಕಾಲದಲ್ಲಿ ಭಾರತದ ಮೇಲೆ ದಾಳಿ ಮಾಡಿ ಆಂಗ್ಲರ ವಿರುದ್ಧ ಹೋರಾಡಿ, ಕೊನೆಗೊಮ್ಮೆ ಸೋಲನುಭವಿಸಿದ ದೇಶವಿದು. ಈ ದೇಶದ ಜನರು ವಾರಕ್ಕೆ ಕೇವಲ 27.6 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಅಲ್ಲದೇ ಒಂದು ವಾರದಲ್ಲಿ ಅಲ್ಲಿನ ಜನರಿಗೆ ಬರೋಬ್ಬರಿ ನಾಲ್ಕು ದಿನ ರಜೆ ಸಿಗುತ್ತದಂತೆ. ಆದರೂ ಡಚ್ಚರ ನಾಡಿನ ಜಿಡಿಪಿ ಉತ್ತಮವಾಗಿದ್ದು, ಅಲ್ಲಿನ ಜನಜೀವನ ಸುಖಕರವಾಗಿದೆ.

2. ಬೆಲ್ಜಿಯಂ

Belgium_reddit

ಓಇಸಿಡಿ ಎಂಬ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ, ಬೆಲ್ಜಿಯಂ ದೇಶದ ನೌಕರರು 8 ಗಂಟೆ ಮಾತ್ರ ಕೆಲಸ ಮಾಡಬಹುದು. ಅದಕ್ಕಿಂತ ಹೆಚ್ಚಿನ ಕೆಲಸ ಅಲ್ಲಿ ಮಾಡುವಂತಿಲ್ಲ. ಆದ್ದರಿಂದ ಒಬ್ಬ ಬೆಲ್ಜಿಯಂ ದೇಶದ ಪ್ರಜೆ ಸುಮಾರು 16.61 ಗಂಟೆಗಳ ಕಾಲ ವಿರಾಮ ತೆಗೆದುಕೊಳ್ಳುತ್ತಾರೆ.

3. ಫ್ರಾನ್ಸ್

france_ismegawall-blogspot

ವಿಶ್ವದ ಅಗ್ರಗಣ್ಯ ದೇಶ ಎನಿಸಿಕೊಂಡಿರುವ ಫ್ರಾನ್ಸ್ ಕೂಡಾ ಕೆಲಸ ಮಾಡಲು ಅತ್ಯಂತ ಉತ್ತಮ ದೇಶ ಎಂದು ಖ್ಯಾತಿ ಪಡೆದಿದೆ. ಈ ದೇಶದಲ್ಲಿ ಜನರು ಸುಮಾರು 40 ದಿನ ರಜೆಯನ್ನು ಪಡೆಯಬಹುದು. ಅಲ್ಲದೇ ಯಾವುದೇ ರೀತಿಯ ತಪಾಸಣೆ ಮತ್ತು ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

4. ಬಲ್ಗೇರಿಯಾ

bulgaria_budnaera

ಈ ದೇಶ ಕೆಲಸದ ಜೊತೆ ಮಕ್ಕಳೊಂದಿಗೆ ಜೀವನ ನಡೆಸಲು ಅನುಕೂಲಕರವಾಗಿದೆ. ಅಲ್ಲದೇ ಮಾತೃತ್ವ ರಜೆ ಎಂದು ಸುಮಾರು 410 ದಿನಗಳವರೆಗೆ ಧೀರ್ಘ ರಜೆಯನ್ನು ನೀಡಲಾಗುತ್ತದೆ. ಅಲ್ಲದೇ ಶೇಕಡಾ 90ರಷ್ಟು ಸಂಬಳವನ್ನು ನೀಡಲಾಗುತ್ತದೆ. ಅಲ್ಲದೇ ಪತ್ನಿ ಗರ್ಭಿಣಿಯಾಗಿದ್ದರೆ ಪತಿ ಹಾಗೂ ಮನೆ ಹಿರಿಯ ಎನಿಸಿಕೊಂಡವರಿಗೂ ರಜೆ ಸಿಗುತ್ತದೆ.

5. ಡೆನ್ಮಾರ್ಕ್

phosee_denmark

ಈ ದೇಶ ಮಹಿಳೆಯರು ಕೆಲಸ ಮಾಡಲು ಅತ್ಯಂತ ಅನುಕೂಲಕರವಾಗಿದೆ. ಏಕೆಂದರೆ ಇಲ್ಲಿ ಮಹಿಳೆಯರು ಒಂದು ವರ್ಷದವರೆಗೂ ರಜೆ ತೆಗೆದುಕೊಳ್ಳಲು ಅವಕಾಶವಿದೆ. ಅಲ್ಲದೇ ಈ ದೇಶದಲ್ಲಿ ವಾರಕ್ಕೆ ಕೇವಲ 50 ಗಂಟೆಗಳವರೆಗೆ ಮಾತ್ರ ಕೆಲಸ ಮಾಡಬೇಕು.

6. ಬ್ರೆಜಿಲ್

brazil_prasannaholidays

ಈ ದೇಶದಲ್ಲಿ ಸಿಗುವಷ್ಟು ರಜೆಗಳು ಇನ್ಯಾವ ದೇಶಗಳಲ್ಲೂ ಸಿಗುವುದಿಲ್ಲ. ಏಕೆಂದರೆ ಬ್ರೆಜಿಲ್ ನಲ್ಲಿ 41 ದಿನ ಸಾಮಾನ್ಯ ರಜೆ ಸಿಗುತ್ತದೆ. ಅಗತ್ಯ ಬಿದ್ದರೆ 30 ದಿನಗಳವರೆಗೆ ರಜೆ ಪಡೆಯಬಹುದು. ಇದರ ಜೊತೆ 11 ದಿನ ಸರ್ಕಾರಿ ರಜೆಗಳು ಬ್ರೆಜಿಲ್ ದೇಶದಲ್ಲಿ ಸಿಗುತ್ತವೆ.

7. ಲಿಥುವೇನಿಯಾ

lithuania_lithuaniaforyou

ಈ ದೇಶದಲ್ಲಿನ ಪತಿ ಪತ್ನಿಯರು ಅತ್ಯಂತ ಪುಣ್ಯವಂತರು. ಏಕೆಂದರೆ ಪತ್ನಿ ಗರ್ಭಿಣಿಯಾದರೆ ಆಕೆ ಹಾಗೂ ಆಕೆಯ ಪತಿಗೆ ರಜೆ ದೊರೆಯುತ್ತದೆ. ಅದರ ಜೊತೆಗೆ ಮೊದಲ ವರ್ಷ ಸುಮಾರು 70% ಸಂಬಳ ನೀಡಲಾಗುತ್ತದೆ. ಎರಡನೇ ವರ್ಷ 40%ರಷ್ಟು ಸಂಬಳವನ್ನು ಸರ್ಕಾರ ನೀಡುತ್ತದೆ.

8. ಸ್ವೀಡನ್

Sweden_thelistbuzz

ಈ ದೇಶ ಕೂಡಾ ಗರ್ಭಿಣೀಯರಿಗೆ ಹೇಳಿ ಮಾಡಿಸಿದ್ದಂತಹ ಕೆಲಸಗಳನ್ನು ಹೊಂದಿದೆ. ಏಕೆಂದರೆ ಗರ್ಭಿಣಿ ಮಹಿಳೆಯರಿಗೆ ಇಲ್ಲಿ ಸುಮಾರು 480 ದಿನಗಳು ಅಥವಾ 16 ತಿಂಗಳವರೆಗೆ ರಜೆ ಸೌಲಭ್ಯ ನೀಡುತ್ತದೆ. ಅಲ್ಲದೇ ಈ ದೇಶದಲ್ಲಿ ಅಬ್ಬಬ್ಬಾ ಎಂದರೆ 6 ಗಂಟೆವರೆಗೆ ಮಾತ್ರ ಕೆಲಸ ಮಾಡಬಹುದಂತೆ..!

9. ಜರ್ಮನಿ

germany_blog-crownrelo

ಜರ್ಮನ್ನರು ಒಂದು ವಾರಕ್ಕೆ ಕೇವಲ 27 ಗಂಟೆ ಮಾತ್ರ ಕೆಲಸ ಮಾಡುತ್ತಾರಂತೆ. ಅರ್ಥಾತ್ ದಿನಕ್ಕೆ ಕೇವಲ 4 ಗಂಟೆ ಕೆಲಸ ಮಾಡುವ ಭಾಗ್ಯ ಜರ್ಮನ್ನರಿಗೆ ಸಿಗುತ್ತದೆ. ಅಲ್ಲದೇ ಈ ದೇಶದ ಜಿಡಿಪಿಯೂ ಕೂಡಾ ಉನ್ನತ ಮಟ್ಟದಲ್ಲಿದ್ದು, ಮುಂದುವರೆದ ದೇಶಗಳ ಪಟ್ಟಿಯಲ್ಲಿ ಈ ದೇಶ ಸ್ಥಾನ ಪಡೆದಿದೆ.

10. ನಾರ್ವೆ

norway_homeaway

ಈ ದೇಶವು ಅತಿ ಹೆಚ್ಚು ರಜೆ ನೀಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದೆ. ಏಕಂದರೆ ಇಲ್ಲಿ 47 ವಾರ ರಜೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ 57 ದಿನಗಳವರೆಗೆ ರಜೆ ಪಡೆಯುವ ಅವಕಾಶವಿದೆ. ಅಲ್ಲದೇ ಎಲ್ಲಾ ರವಿವಾರಗಳಂದು ಸಾಮಾನ್ಯ ರಜೆ ದೊರೆಯುತ್ತದೆ. ಇಷ್ಟೆಲ್ಲಾ ರಜೆಗಳನ್ನು ನೀಡುವ ನಾರ್ವೆ ದೇಶ ಜಿಡಿಪಿ ಪ್ರಗತಿಯಲ್ಲಿ ಉನ್ನತ ಮಟ್ಟದಲ್ಲಿದೆ ಎಂಬುದನ್ನು ನಂಬಲೇಬೇಕು.

1 COMMENT

LEAVE A REPLY

Please enter your comment!
Please enter your name here