ಕಂಪ್ಯೂಟರ್ ಬಳಕೆ ಮೊದಲು ತಿಳಿದುಕೊಳ್ಳಬೇಕಾದ ಟಿಪ್ಸ್..!

1
115

ಕಂಪ್ಯೂಟರ್ ಬಳಕೆ ಮೊದಲು ತಿಳಿದುಕೊಳ್ಳಬೇಕಾದ ಟಿಪ್ಸ್..!

ಇಂದು ಕಂಪ್ಯೂಟರ್ ಬಳಕೆ ಕಾಮನ್ ಆಗಿದೆ..! ನಾವೆಲ್ಲಾ ಕಂಪ್ಯೂಟರ್ ಹವ್ಯಾಸಿಗಳೇ…! ಬರೀ ಕಂಪ್ಯೂಟರ್ ಬಳಕೆಗಿಂತಲೂ ನಾವೆಲ್ಲಾ ಇವತ್ತು ಇಂಟರ್ನೆಟ್ ಎಂಬ ಮಾಯಾಜಾಲದ ಗುಲಾಮರಾಗಿ ಬಿಟ್ಟಿದ್ದೇವೆ..! ಕಂಪ್ಯೂಟರ್, ಇಂಟರ್ನೆಟ್ ಇಲ್ದೇ ಜಗತ್ತೇ ಬಿಗ್ ಝೀರೋ..! ಎಲ್ಲರೂ ಕಂಪ್ಯೂಟರ್ ಬಳಕೆದಾರರೇ..ಆದ್ರೆ ಯಾರಿಗೂ ಅದರ ಬಳಕೆಯ ಟ್ರಿಕ್ಸೇ ಗೊತ್ತಿಲ್ಲ..! ಕಂಪ್ಯೂಟರ್ ನಿಂದ ನಮ್ ಸಮಯ ಉಳಿತಾಯ ಆಗ್ತಾ ಇದೆ ಅಂತೀವಿ..! ಬಟ್, ನಾವು ಈಗ ಹೇಳೋ ಟಿಪ್ಸ್ ಅಂಡ್ ಟ್ರಿಕ್ಸ್ ಅನ್ನು ಫಾಲೋ ಮಾಡಿದ್ರೆ ನಿಮ್ಮ ಟೈಮ್ ಇನ್ನೂ ನಿಮ್ಮತ್ರನೇ ಉಳಿತಯುತ್ತೆ..! ಅಂದ್ರೆ ಕಂಪ್ಯೂಟರ್ ಬಳಕೆಯ ಈ ತಂತ್ರಗಳನ್ನು ತಿಳಿಯುದರಿಂದ ಸಮಯ ಉಳಿಯುತ್ತೆ..! ನೀವು ಈ ಟಿಪ್ಸ್, ಟ್ರಿಕ್ಸ್ ಅನ್ನ ತಿಳ್ಕೊಂಡ್ರೆ ಒಳ್ಳೆಯದಾಗುತ್ತೆ..!
* ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಒಂದೇ ಬ್ರೌಸರ್ ನಲ್ಲಿ ಹಲವಾರು ವಿಂಡೋಗಳನ್ನು ಒಪನ್ ಮಾಡಿಕೊಂಡಿರ್ತೀರಾ.. ಆಗ ಆ ವಿಂಡೋಗಳಲ್ಲಿ ಕೇವಲ ಒಂದೇ ಒಂದು ವಿಂಡೋ ಬೇಕು, ಉಳಿದೆಲ್ಲಾ ವಿಂಡೋದ ಅಗತ್ಯ ಈಗ ಬೇಡ, ಬಟ್ ತಡವಾಗಿ ಬೇಕಾಗಿರುತ್ತೆ..! ಆಗ ಏನ್ ಮಾಡ್ತೀರ..? ಅದಕ್ಕಾಗಿ ನೀವು ನಿಮಗೆ ಈ ಕ್ಷಣಕ್ಕೆ ಅಗತ್ಯವಾಗಿರೋ ವಿಂಡೋವನ್ನು ಓಪನ್ ಮಾಡಿ, ಅದನ್ನು ಜಸ್ಟ್ ಶೇಕ್ ಮಾಡಿ..! ಆಗ ಆ ವಿಂಡೋ ಬಿಟ್ಟು ಇತೆರೆ ಟ್ಯಾಬ್ ಗಳಲ್ಲಿರುವ ವಿಂಡೋಗಳು ಮಿನಿಮೈಸ್ ಆಗುತ್ತವೆ..! ಈಗ ನಿಮ್ಮ ಟೈಮು ಉಳಿಯುತ್ತೆ, ನಿಮಗೆ ಬೇಕಾದ ವಿಂಡೋ ಹಂಗೇ ಉಳಿದಿರುತ್ತೆ..! ಮತ್ತೆ ಮತ್ತೆ ಹುಡುಕೋದು ಬೇಡ..!

shake

* ನೀವು ನಿಮ್ಮ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಿಂದ ಯಾವುದಾದರೂ ಫೈಲನ್ನು ಬ್ಲೂಟೂತ್ ಮೂಲಕ ಶೇರ್ ಮಾಡ ಬೇಕೆಂದಿದ್ದರೆ.. “ಸ್ಟಾರ್ಟ್” ಗೆ ಹೋಗಿ, “ರನ್” ಕಮಾಂಡ್ ಗೆ ಹೋಗಿ “ಎಫ್ಎಸ್ಕ್ಯೂಐಆರ್” ಎಂದು ಟೈಪ್ ಮಾಡಿ..! ಫೈಲ್ ಅನ್ನು ಬೇರೆ ಕಂಪ್ಯೂಟರ್ ಗೆ ಕಳುಹಿಸ ಬಹುದು..!

bluetooth

 

* ನೀವು ಆಕಸ್ಮಿಕವಾಗಿ ಅತ್ಯಂತ ಪ್ರಮುಖವಾದ ಟ್ಯಾಬ್ ಕ್ಲೋಸ್ ಮಾಡ್ಬಹುದು..!? ಆ ಟ್ಯಾಬ್ ನ ಮಾಹಿತಿ ಮತ್ತೆ ಹುಡುಕುವುದು ತುಂಬಾ ಕಷ್ಟವೂ ಆಗ್ಬಹುದು..! ಆದ್ರಿಂದ ಆ ಮುಖ್ಯವಾದ ಟ್ಯಾಬ್ ಕ್ಲೋಸ್ ಆಗದಂತೆ ನೋಡಿಕೊಳ್ಳಲು ಆ ಟ್ಯಾಬ್ ನ ಮೇಲೆ ರೈಟ್ ಕ್ಲಿಕ್ ಮಾಡಿ, ಪಿನ್ ಟ್ಯಾಬ್ ಅನ್ನು ಕ್ಲಿಕ್ ಮಾಡಿದ್ರೆ ಸಾಕು.. ನೀವಾಗಿಯೇ ಓಕೆ, ಇದನ್ನು ಕ್ಲೋಸ್ ಮಾಡ್ಬಹುದು ಅನ್ನೋ ತನಕ ಅದು ಕ್ಲೋಸ್ ಆಗಲ್ಲ..! ಟ್ರೈ ಮಾಡಿ ನೋಡಿ.. ತುಂಬಾ ಸಹಕಾರಿ ಆಗುತ್ತೆ..!

pin-tab

* ಪೂರ್ವ ನಿರ್ಧಾರಿತವಾಗಿ ನಿಮ್ಮ ಕಂಪ್ಯೂಟರ್ ನಿರ್ಧಿಷ್ಟ ಅವಧಿಯ ನಂತರ ಶಟ್ ಡೌನ್ ಆಗ್ಬೇಕು ಅಂದ್ರೆ.. ರನ್ ಕಾಮಾಂಡ್ ಗೆ ಹೋಗಿ,  shutdown.exe /s /t [time example 3600 for 60 minutes]  ಮಾಡಿದ್ರೆ ನೀವು ಕೊಟ್ಟ ಟೈಮ್ ಗೆ ಅದು ಶೆಟ್ ಡೌನ್ ಆಗುತ್ತೆ..!

shutdown

shutdown1

* ನಿಮಗಿದು ಗೊತ್ತಾ..? ವಿಎಲ್ಸಿ ಮೀಡಿಯಾ ಪ್ಲೇಯರ್ನಿಂದ ಯಾವುದೇ ಫಾರ್ಮ್ಯಾಟ್ ಗೆ ವಿಡಿಯೋ ಕನ್ವರ್ಟ್ ಮಾಡ್ಬಹುದು..! ನೀವು ವಿಎಲ್ಸಿ ಮೀಡಿಯಾ ಪ್ಲೇಯರ್ ಓಪನ್ ಮಾಡಿ ಎಡ ಭಾಗದ ಮೇಲ್ಗಡೆ ಇರುವ ಮೀಡಿಯಾ ಆಪ್ಷನ್ ಗೆ ಹೋಗಿ “ಕನ್ವರ್ಟ್/ ಸೇವ್” ಆಪ್ಷನ್ ಸಹಾಯದಿಂದ ವಿಡಿಯೋ ಕನ್ವರ್ಟ್ ಮಾಡ್ಬಹುದು..!

vlc-600x386

vlc1

* ಎಲ್ಲಾ ವಿಕಿಪಿಡಿಯಾ ಲೇಖನಗಳನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡ್ಬಹುದು..! ಅಷ್ಟೇ ಅಲ್ಲ ಆ ಲೇಖನಗಲನ್ನು ಭಾರತದ ಪ್ರಾದೇಶಿಕ ಭಾಷೆಗಳು ಸೇರಿದಂತೆ 50 ಕ್ಕೂ ಹೆಚ್ಚು ಭಾಷೆಗಳಲ್ಲಿ ಓದಬಹುದು..!

wiki-600x320

* ಕಂಪ್ಯೂಟರ್ ಬಳಸ್ತೀರ ಅಂದ್ರೆ ನೋಟ್ ಪ್ಯಾಡ್ ನ ಬಗ್ಗೆ ತಿಳಿದಿರ್ಲೇಬೇಕು..! ಇದು ಕೇವಲ ಬೇಸಿಕ್ ಟೆಕ್ಸ್ಟ್ ಎಡಿಟರ್ ಎಂದು ನಾವು ಕಡೆಗಾಣಿಸಲಾಗಲ್ಲ..! ಇದರ ಸಾಮಥ್ರ್ಯ ನಿಜಕ್ಕೂ ಅಮೇಜಿಂಗ್..! ಇದರಿಂದ ಮ್ಯಾಟ್ರಿಕ್ಸ್ ಕ್ರಿಯೇಟ್ ಮಾಡ್ಬಹುದು..!

Inspired by the movie Matrix, this falling code trick is extremely popular on social networking websites. Copy and paste the code given below in Notepad and save the file as “Matrix.bat” or *.bat.

—————————————–
@echo off
color 02
:tricks
echo %random%%random%%random%%random%%random%%random%%random%%random%
goto tricks

—————————-

ಈ ಕೋಡ್ ಅನ್ನು ನೀವು ನೋಟ್ ಪ್ಯಾಡ್ನಲ್ಲಿ “Matrix.bat” or *.bat. ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ ನಂತರ ಟೆಕ್ಸ್ಟ್ ಹಾಕಿದ್ರೆ ಮ್ಯಾಟ್ರಿಕ್ಸ್ ಮ್ಯಾಜಿಕ್ ಅನ್ನು ನೋಡ್ಬಹುದು..!
*ಇನ್ನು ಡಮ್ಮಿ ವೈರಸ್ ಕ್ರಿಯೇಟ್ ಮಾಡಿ ನಿಮ್ಮ ಫ್ರೆಂಡ್ಸ್ ತಲೆ ಕೆಡಿಸ್ಬಹುದು..!
This VBS trick can make any of your friend’s keyboard type any message continuously. Open Notepad, copy the code given below and save the file as Tricks.vbs or *.vbs. You will need to restart your computer to stop this. Try this after closing all important programs.
——————————————————————————————————-

Set wshShell = wscript.CreateObject(“WScript.Shell”)
do
wscript.sleep 100
wshshell.sendkeys “This is a Virus. You have been infected.”
loop

——

ನೋಟ್ ಪ್ಯಾಡ್ನಲ್ಲಿ ಈ ಕೋಡ್ ಪೇಸ್ಟ್ ಮಾಡಿ Tricks.vbs  ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ ಡಬಲ್ ಕ್ಲಿಕ್ ಮಾಡಿ.. ನೋಡಿ, ಆಮೇಲೆ ನಿಮ್ ಸಿಸ್ಟಮ್ ರೀ ಸ್ಟಾರ್ಟ್ ಮಾಡಲೇಬೇಕು..! ಈ ಪ್ರಯೋಗ ನಿಮ್ಮ ಫ್ರೆಂಡ್ ಕಂಪ್ಯೂಟರ್ನಲ್ಲಿ ಮಾಡಿ ತಮಾಷೆ ನೋಡಿ.. ಅವರ ತಲೆಗೆ ಹುಳಬಿಡಿ..! ಇದು ಟೈಮ್ ಸೇವ್ ಗೆ ಅಲ್ಲ.. ಟೈಮ್ ಪಾಸ್ ಗೆ..!

* ನಿಮ್ಮ ಕಂಪ್ಯೂಟರ್ ಮಾತನಾಡುವಂತೆ ಮಾಡ್ಬಹುದು..! ನೀವು ಅದರಲ್ಲಿ ಏನ ಮಾಡ್ತೀರೋ ಅವೆಲ್ಲವನ್ನೂ ಕೇಳಿಸಿಕೊಳ್ಳಬಹುದು..! ಅದಕ್ಕಾಗಿ ನೀವೇ ನಿಮ್ಮ ಸಿಸ್ಟಮ್ನಲ್ಲಿ ಸ್ಕ್ರಿಪ್ಟ್ ರೆಡಿಮಾಡಿಕೊಳ್ಳ ಬೇಕಾಗುತ್ತೆ..! ಸ್ಕ್ರಿಪ್ಟ್ ವಿಂಡೋ ರಚಿಸಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ..

Talk it

Steps
1.ನೇ ಹಂತ : ನೋಟ್ ಪ್ಯಾಡ್ ಓಪನ್ ಮಾಡಿ
2ನೇ ಹಂತ : Copy and paste the exact code given below.
—————————————————————

          Dim Message, Speak
Message=InputBox(“Enter text”,”Speak”)
Set Speak=CreateObject(“sapi.spvoice”)
Speak.Speak Message

—————————————————————–

3ನೇ ಹಂತ : ಈ ಕೋಡ್ ಅನ್ನು ಕಾಪಿ ಪೇಸ್ಟ್ ಮಾಡಿ..! ನಂತರ ಫೈಲ್ ಮೆನುಗೆ ಹೋಗಿ, ಸೇವ್ ಆ್ಯಸ್ ನಲ್ಲಿ ಆಲ್ ಟೈಪ್ ಅನ್ನೋದನ್ನು ಸೆಲೆಕ್ಟ್ ಮಾಡಿ, ಆಮೇಲೆ Speak.vbs ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ..!

 4ನೇ ಹಂತ : ಸೇವ್ ಆದ ಫೈಲ್ ಡಬಲ್ ಕ್ಲಿಕ್ ಮಾಡಿ. ಒಂದು ವಿಂಡೋ ಓಪನ್ ಆಗುತ್ತೆ..! ಅಲ್ಲಿನ ಟೆಕ್ಸ್ಟ್ ಕಾಲಂನಲ್ಲಿ ಯಾವುದಾದರೂ ಟೆಕ್ಸ್ಟ್ ಪೇಸ್ಟ್ ಮಾಡಿ ಓಕೆ ಕೊಡಿ.. ನಂತತ ನೀವೇ ಟ್ರೈ ಮಾಡಿ ನಿಮ್ಮ ಕಂಪ್ಯೂಟರ್ ಮಾತಾಡುತ್ತೆ..!
*ಅನೇಕ ಶಾರ್ಟ್ ಕಟ್ ಗಳಿವೆ ಕೆಲವೊಂದು ನಿಮಗೆ ಗೊತ್ತಿರ್ಬಹುದು, ಗೊತ್ತಿಲ್ಲದೇ ಇರುವುದನ್ನು ಆರಾಮ್ಸೆ ತಿಳಿದು ಅದನ್ನು ಬಳಸಿ ಸಮಯದ ಉಳಿತಾಯವನ್ನು ಮಾಡಿ..!
ಸಧ್ಯಕ್ಕೆ ಇಷ್ಟು ಸಾಕು. ಇನ್ನೂ ಅನೇಕ ಕಂಪ್ಯೂಟರ್ ಟಿಕ್ಸ್ ಗಳಿವೆ ಸಧ್ಯಕ್ಕೆ ಇಷ್ಟನ್ನು ನಿಮಗೆ ತಿಳಿಸ್ತಾ ಇದ್ದೀವಿ..! ನೀವು ಇದನ್ನು ಶೇರ್ ಮಾಡೋ ಮೂಲಕ ತಿಳಿಸ್ತೀರ..! ಎಲ್ಲರ ಅಭಿಪ್ರಾಯ ಕೇಳಿ, ನಿಮ್ಮ ರೆಸ್ಪಾನ್ಸ್ ತಿಳಿದು ಹೀಗೆ ಆಗಾಗ ಹೊಸ ಟಿಪ್ಸ್, ಟ್ರಿಕ್ಸ್ ಗಳನ್ನು ನಿಮಗೋಸ್ಕರ ಹೇಳ್ತೀವಿ..! ಅದಕ್ಕೋಸ್ಕರ ನಮ್ಮ “ದಿ ನ್ಯೂ ಇಂಡಿಯನ್ ಟೈಮ್ಸ್ ” ನೋಡ್ತಾ ಇರಿ..!

1 COMMENT

LEAVE A REPLY

Please enter your comment!
Please enter your name here