ಮಲದ ದುರ್ವಾಸನೆ ಈ ಕಾಯಿಲೆ ಲಕ್ಷಣವಿರಬಹುದು..!

0
149

ಮಲದ ದುರ್ವಾಸನೆ ಈ ಕಾಯಿಲೆ ಲಕ್ಷಣವಿರಬಹುದು..!

ಇದೇನ್ರೀ … ಥೂ ಕರ್ಮ ಮಲ ವಾಸನೆ ಬರ್ದೆ ಇರುತ್ತಾ ? ಅಂತ ಬೈತಿದ್ದೀರಾ ? ನಾವು ತಿಂದ ಆಹಾರ ಜೀರ್ಣವಾಗಿ ಅದರಲ್ಲಿನ ಪೋಷಕಾಂಶಗಳು ದೇಹವನ್ನು ಹೀರಿಕೊಂಡ ಬಳಿಕ ಉಳಿದ ಕಲ್ಮಶಗಳೇ ಮಲದ ರೂಪದಲ್ಲಿ ಹೊರ ಬರುತ್ತವೆ . ಈ ಮಲ ಕೆಟ್ಟ ದುರ್ವಾಸೆ ಬರುವುದು ಸಾಮಾನ್ಯ . ಆದರೆ ಅತಿಯಾದ ವಾಸನೆ ಇದ್ದರೆ ಕ್ಯಾನ್ಸರ್ ಲಕ್ಷಣ ಇರಬಹುದು ಹುಷಾರ್ …!

ಇದು ನಿಮಗೆ ಅಚ್ಚರಿ ಅನಿಸಿದರೂ ಸತ್ಯ ಸಂಗತಿ ‌ . ತಮಾಷೆ ವಿಚಾರವಲ್ಲ . ಕ್ಯಾನ್ಸರ್ ಎಂಬ ಮಹಾಮಾರಿ ನಮ್ಮ ದೇಹವನ್ನು ನುಸುಳಿದ ಕೂಡಲೇ ಅನೇಕ ಸೂಚನೆಗಳು ಬರುತ್ತವೆ . ಆ ಸೂಚನೆಗಳಲ್ಲಿ ಮಲದ ದುರ್ವಾಸನೆ ಕೂಡ ಒಂದು . ಆ ಸೂಚನೆಯನ್ನು ನಾವು ಅರ್ಥ ಮಾಡಿಕೊಳ್ಳದೆ ತಾತ್ಸಾರ ಮಾಡಿದರೆ ಬಹಳ ತೊಂದರೆ ಅನಿಭವಿಸಿ , ಚಿಕಿತ್ಸೆಯೂ ಫಲಪ್ರದವಾಗದೆ ನಾವು ಸಾಯಬಹುದು . ಹಾಗಾಗಿ ಮಲ ವಿಸರ್ಜನೆ ವೇಳೆ ಅತಿಯಾದ ದುರ್ವಾಸನೆ ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ , ಚಿಕಿತ್ಸೆ ಪಡೆಯಿರಿ .

ಕರುಳಿನ ಕ್ರಿಯೆ ಸಂದರ್ಭದಲ್ಲಿ ಸ್ಟೀಟರ್ರೋಹಿಯಾ ಅತಿಯಾಗಿ ಇರುವುದೇ ಅದಕ್ಕೆ ಕಾರಣ .‌ ಮಲದಲ್ಲಿ ಅತಿಯಾಗಿ ಕೊಬ್ಬು ಇರುವುದರಿಂದ ದುರ್ವಾಸನೆ ಬರುತ್ತದೆ . ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಮುದ್ದೆ ಮಲ ಬರುವುದು ..! ಯಾಕೆಂದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಜೀರ್ಣಕ್ರಿಯೆಯ ಸಮಸ್ಯೆಯಿಂದ ಬರುವಂತಹದು .

ಇಂಗ್ಲೆಂಡ್ ನ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಸಂಸ್ಥೆಯೊಂದರ ಪ್ರಕಾರ , ಈ ಮಲ ತುಂಬಾ ಎಣ್ಣೆಯುಕ್ತವಾಗಿದ್ದು , ತೇಲಬಹುದು ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಹಳದಿ ಕೂಡ ಆಗಿರುತ್ತದೆ ‌ .

ಈ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸದು . ಆದ್ದರಿಂದ ಅದನ್ನು ಪತ್ತೆ ಹಚ್ಚುವುದು ಕಷ್ಟವೇ .ನಿಧಾನಕ್ಕೆ ಲಕ್ಷಣಗಳು ಕಂಡು ಬರುತ್ತವೆ .

ಮಲದಲ್ಲಿ ಕೊಬ್ಬಿನ ಅಂಶ ಹೆಚ್ಚಿದ್ದರೆ ಅದನ್ನು ಕೊಬ್ಬಿನ ಮಲ ಎಂದು ಕರೆಯುತ್ತೇವೆ ‌ ‌. ಅದು ಹಳದಿ, ಎಣ್ಣೆಯುಕ್ತ ಹಾಗೂ ದುರ್ವಾಸನೆಯಿಂದ ಕೂಡಿರುತ್ತೆ . ಟಾಯ್ಲೆಟ್ ಫ್ಲಶ್ ಮಾಡಲು ಕೂಡ ಕಷ್ಟವಾಗಬಹುದು .‌

ಇನ್ನು ಈ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ಲಕ್ಷಣ, ಚಿಹ್ನೆ ಏನನ್ನೂ ಸೂಚಿಸುವುದಿಲ್ಲ‌ . ಅತಿಸಾರದಂತಹ ಹೊಟ್ಟೆ ಸಮಸ್ಯೆ ಇದರ ಲಕ್ಷಣ . ಪದೇ ಪದೇ ಮಲ ವಿಸರ್ಜನೆಗೆ ಹೋಗಬೇಕಾಗುತ್ತದೆ . ಇನ್ನು 74 ವರ್ಷದ ನಂತರ ಈ ಸಮಸ್ಯೆ ಹೆಚ್ಚು .

 

LEAVE A REPLY

Please enter your comment!
Please enter your name here