ರಷ್ಯಾದ ಇವರು ಬೆಂಗಳೂರಲ್ಲಿ ಮಾಡ್ತಿದ್ದಾರೆ ಮಾದರಿ ಕೆಲಸ..!

0
117

 

ಇಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ವ್ಲಾಡಿಮಿರ್ ‘ ಬ್ಯೂಟಿಫುಲ್ ಇಯರ್ಸ್’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ನೈತಿಕ ಬೆಂಬಲ ನೀಡುವ ಮೂಲಕ, ನವೀನ ಉತ್ಪನ್ನಗಳನ್ನು ಪೂರೈಸುವ ಮೂಲಕ, ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಹಿರಿಯ ನಾಗರೀಕರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ಅವರ ಬಗ್ಗೆ ಕಾಳಜಿ ವಹಿಸುವುದು ವ್ಲಾಡಿಮಿರ್ ಅವರ ಉದ್ದೇಶ.
ವ್ಲಾಡಿಮಿರ್ ಒಬ್ರು ಸಾಫ್ಟ್ವೇರ್ ಕಾರ್ಯನಿರ್ವಾಹಕರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 30 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಅವರಿಗಿದೆ. ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಹುಟ್ಟಿ ಬೆಳೆದ ಅವರು ಇಸ್ರೇಲ್ನ ಜೆರುಸಲೇಮ್ನಲ್ಲಿ 12 ವರ್ಷ ಕಾರ್ಯನಿರ್ವಹಿಸಿದ್ದಾರೆ. ಬಳಿಕ 2000ನೇ ಇಸ್ವಿಯಲ್ಲಿ ಅವರು ಬೆಂಗಳೂರಿಗೆ ಬಂದ್ರು. ಬ್ರಿಟಿಷ್ ಎಂಎನ್ಸಿಯ ಶಾಖೆಯೊಂದನ್ನು ತೆರೆಯುವುದು ಅವರ ಉದ್ದೇಶವಾಗಿತ್ತು.
ಬೆಂಗಳೂರಿನ ಎಂಎನ್ ಸಿಯೊಂದರಲ್ಲಿ 2 ಸಾವಿರದ 200 ಮಂದಿ ಕಾರ್ಯನಿರ್ವಹಿಸ್ತಾ ಇದ್ರು. 6 ತಿಂಗಳು ನಡೆಯಬೇಕಿದ್ದ ಕೆಲಸ 16 ವರ್ಷಗಳ ವರೆಗೆ ಮುಂದುವರಿದಿತ್ತು. ಆದ್ರೆ, ಸಿಸ್ಕೋದ ವಿಪಿ ಎಂಜಿನಿಯರಿಂಗ್ನಲ್ಲಿ ಕಾರ್ಯನಿರ್ವಹಿಸ್ತಾ ಇದ್ದ ವ್ಲಾಡಿಮಿರ್ ತಮ್ಮ ಕೆಲಸಕ್ಕೆ ಗುಡ್ಬೈ ಹೇಳಿ ಬ್ಯೂಟಿಫುಲ್ ಇಯರ್ಸ್’ನತ್ತ ಹೆಚ್ಚು ಗಮನಹರಿಸಿದ್ರು.


ವ್ಲಾಡಿಮಿರ್ ಅವರಿಗೆ ಹಿರಿಯ ಜೀವಿ ಅವರ ಚಿಕ್ಕಮ್ಮನ ಸ್ಫೂರ್ತಿಯಂತೆ. ಚಿಕ್ಕಮ್ಮನವರು ಕೂಡಿಟ್ಟ ಹಣದಿಂದ್ಲೇ ಬ್ಯೂಟಿಫುಲ್ ಇಯರ್ಸ್’ ಅನ್ನು ಕಟ್ಟಲು ವ್ಲಾಡಿಮಿರ್ ಅವರಿಗೆ ಪ್ರೇರಣೆಯಾಗಿತ್ತು. ಬ್ಯೂಟಿಫುಲ್ ಇಯರ್ಸ್ ವೇದಿಕೆ ಬಳಕೆದಾರರಿಗೆ ಸಂಪೂರ್ಣ ಉಚಿತ. ತಮ್ಮ ಇ-ಕಾಮರ್ಸ್ ಪೋರ್ಟಲ್ ಮೂಲಕ ವ್ಲಾಡಿಮಿರ್ ಆದಾಯ ಸಂಗ್ರಹಿಸುತ್ತಿದ್ದಾರೆ.
ವ್ಲಾಡಿಯರ್ ಅವರ ಇ-ಶಾಪ್ನಲ್ಲಿ ಮ್ಯಾಗ್ನಿ ಫೈಯಿಂಗ್ ಲೆನ್ಸ್ ಹೊಂದಿರುವ ನೇಲ್ ಕಟರ್ಗಳು, ಬುಕ್ ಹೋಲ್ಡರ್ಗಳು, ಮಾತ್ರೆಗೆಳನ್ನು ಕತ್ತರಿಸುವ ಸಾಧನ, ಮೋಟಾರ್ ಅಳವಡಿತ ವ್ಹೀಲ್ ಚೇರ್ ಸೇರಿದಂತೆ ಹಿರಿಯ ಜೀವಗಳ ಬದುಕಿಗೆ ಅಗತ್ಯವಾದ ವಸ್ತುಗಳು ದೊರೆಯುತ್ತವೆ. ಸ್ಥಳೀಯವಾಗಿ ಉತ್ಪಾದಿಸಿದ ಪ್ರಾಡಕ್ಟ್ಗಳು ಮಾತ್ರವಲ್ಲದೆ, ವಿದೇಶಗಳಿಂದ್ಲೂ ಬ್ಯೂಟಿಫುಲ್ ಇಯರ್ಸ್’ ಅತ್ಯಾಧುನಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಬ್ಯೂಟಿಫುಲ್ ಇಯರ್ಸ್ ಕಣ್ಣಿನ ಸಮಸ್ಯೆ ಇರುವವರಿಗಾಗಿ ಕನ್ನಡಕ, ಸಕ್ಕರೆ ಖಾಯಿಲೆ ಇರುವವರಿಗಾಗಿ ವಿಶೇಷ ಬೂಟುಗಳು, ಅನಾರೋಗ್ಯದಿಂದ ಹಾಸಿಗೆ ಹಿಡಿದವರಿಗಾಗಿ ವಿಶೇಷ ಉಡುಪುಗಳನ್ನು ತರಿಸಿಕೊಳ್ಳಲಾಗುತ್ತೆ. ಸೀನಿಯರ್ ಕೇರ್ ಉತ್ಪನ್ನಗಳನ್ನು ಖರೀದಿಸಿದವರಿಗೆ ಸೇವೆಗಳ ಅಗತ್ಯ ಕೂಡ ಇರುತ್ತದೆ. ಅವರಿಗೆ ಫಿಸಿಯೋಥೆರಪಿಸ್ಟ್ಗಳು, ಮನೆಯಲ್ಲೇ ಡಯಾಗ್ನೋಸ್ಟಿಕ್ ಸೇವೆ, ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುತ್ತದೆ.
ದೊಡ್ಡ ದೊಡ್ಡ ಆಸ್ಪತ್ರೆಗಳು, ಬ್ಯಾಂಕ್ಗಳು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳ ಜೊತೆ ಸೇರಿ ಆದಾಯ ಸಂಗ್ರಹಿಸಿ, ಹಿರಿಯರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲು ಕೂಡ ವ್ಲಾಡಿ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ಬದುಕಿನ ಕಥೆ ಹಾಗೂ ಸಾಹಸವನ್ನು ಹಂಚಿಕೊಳ್ಳಲು ಬಯಸುವ ಹಿರಿಯರ ಸಮುದಾಯವನ್ನು ರಚಿಸಲು ವ್ಲಾಡಿಮಿರ್ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ ವೃದ್ಧರ ಬಗ್ಗೆ ಕಾಳಜಿ ವಹಿಸಲು ಬಯಸುವವರಿಗೂ ಒಂದು ಅವಕಾಶ ಕಲ್ಪಿಸುವುದು ಅವರ ಉದ್ದೇಶ.
ಒಟ್ನಲ್ಲಿ ಬಾಳ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ಊರುಗೋಲಾಗಿರುವ ವ್ಲಾಡಿಮಿರ್ ಅವರ ಕಳಕಳಿ ಇಡೀ ಸಮಾಜಕ್ಕೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here