PDF ಫೈಲ್ ಗೆ ಸಹಿ ಮಾಡೋದು ಹೇಗಂತ ಗೊತ್ತಾ?

0
111

PDF ಫೈಲ್ ಗೆ ಸಹಿ ಮಾಡೋದು ಹೇಗಂತ ಗೊತ್ತಾ? 

ಇಮೇಲ್‌ ಮೂಲಕ ಸ್ವೀಕರಿಸುವ ದಾಖಲೆಗಳ ಮೇಲೆ ಸಹಿ ಹಾಕುವುದು ಹೊಸದೇನಲ್ಲ. ಇಡೀ ದೇಶ ಲಾಕ್ ಡೌನಿನಲ್ಲಿದ್ದಾಗ ಬಹಳಷ್ಟು ಜನ ಮನೆಯಿಂದಲೇ ಕೆಲಸ ಮಾಡುವಂತಾಗಿತ್ತು. ಈ ವೇಳೆ ಡಿಜಿಟಲ್ ಮೂಲಕವೇ ಸಹಿ ಮಾಡಿ ದಾಖಲೆಗಳನ್ನು ದೃಢೀಕರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಡೌನ್‌ಲೋಡ್ ಮಾಡುವುದು, ಪ್ರಿಂಟ್ ಮಾಡುವುದು, ಸಹಿ ಮಾಡಿ, ಸ್ಕ್ಯಾನ್ ಮಾಡಿ ಮತ್ತೆ ವಾಪಾಸ್ ಇ ಮೇಲ್ ಮಾಡುವುದು ದೊಡ್ಡ ಪ್ರಕ್ರಿಯೆ. ಇದು ಸ್ವಲ್ಪ ಹಳೆಯ ವಿಧಾನ ಮತ್ತು ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದಕ್ಕಿಂತ ವೇಗವಾಗಿ ಹಾಗೂ ಉತ್ತಮವಾಗಿ, ಸ್ಕ್ಯಾನ್ ಮತ್ತು ಪ್ರಿಂಟ್ ಮಾಡುವ ತೊಂದರೆ ಇಲ್ಲದ ಅವಕಾಶವಿದೆ. ಅದುವೇ ಇಲೆಕ್ಟ್ರಾನಿಕ್ ಸಹಿ. ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಸಿ ಇಲೆಕ್ಟ್ರಾನಿಕ್ ಸಹಿ ಮಾಡುವ ವಿಧಾನ..!

ಒಂದು ಬಿಳಿ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿ. ಅದನ್ನು ಸ್ಕ್ಯಾನ್ ಮಾಡಿ ನಿಮ್ಮ ಕಂಪ್ಯೂಟರಿನಲ್ಲಿ ಸೇವ್ ಮಾಡಿ. ನಿಮ್ಮ ಸಹಿಯನ್ನು ಡಿಜಿಟಲ್ ರೂಪಕ್ಕೆ ತರಲು ಈ ಸ್ಕ್ಯಾನ್ ಒಂದು ಸಲ ಮಾತ್ರ ಮಾಡಬೇಕಾದ್ದು. ನಂತರ ನೀವು ಸಹಿ ಮಾಡಬೇಕಾದ ದಾಖಲೆಯನ್ನು ವರ್ಡ್ ಪ್ರೊಸೆಸರ್ ಅಥವಾ ಇಮೇಜ್ ಎಡಿಟರ್‌ನಲ್ಲಿ ತೆರೆದು, ನಿಮ್ಮ ಸಹಿಯನ್ನು ಬೇಕಾದ ಜಾಗದಲ್ಲಿ ಪೇಸ್ಟ್ ಮಾಡಬಹುದು.

ನೀವು ಸ್ವೀಕರಿಸಿದ ದಾಖಲೆಯನ್ನು ಅಡೋಬ್ ರೀಡರ್ ಮೂಲಕ ಓಪನ್ ಮಾಡಿ.
ಬಲ ಭಾಗದ ಪಟ್ಟಿಯಲ್ಲಿರುವ ಫೈಲ್ ಮತ್ತು ಸೈನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಟೂಲ್ ಬಾರಿನಲ್ಲಿರುವ ಸೈನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಸಹಿ ಸೇರಿಸುವ ಆಪ್ಷನ್ ಅನ್ನು ಆಯ್ಕೆ ಮಾಡಿ.
ಈಗ ಅಡೋಬ್ ರೀಡರ್ ಡಿಸಿ ನಿಮಗೆ ಸಹಿ ಮಾಡಲು ಮೂರು ಆಯ್ಕೆಗಳನ್ನು ನೀಡುತ್ತದೆ.

ಅಡೋಬ್‌ ಆಟೋಮ್ಯಾಟಿಕ್ ಸಿಗ್ನೇಚರ್ ಕನ್ವರ್ಟರ್ ಬಳಸಿ – ನಿಮ್ಮ ಹೆಸರನ್ನು ಟೈಪ್ ಮಾಡಿದರೆ, ಅಡೋಬ್ ಅದನ್ನು ಸಹಿಯಾಗಿ ಬದಲಾಯಿಸುತ್ತದೆ. ಆದರಿದು ನಿಮ್ಮ ಸ್ವಂತ ಸಹಿಯಂತೆ ಇರುವುದಿಲ್ಲ.

ಚಿತ್ರಿಸಿ – ಟ್ರ್ಯಾಕ್ ಪ್ಯಾಡ್, ಮೌಸ್ ಅಥವಾ ಟಚ್ ಸ್ಕ್ರೀನ್ ಬಳಸಿ ನಿಮ್ಮ ಸಹಿ ಮಾಡಬಹುದು.
ಆಮದು ಮಾಡಿ – ನಿಮ್ಮ ಸಹಿಯನ್ನು ಆಮದು ಮಾಡಿಕೊಂಡು ಬೇಕಾದಲ್ಲಿ ಸೇರಿಸಬಹುದು.

LEAVE A REPLY

Please enter your comment!
Please enter your name here