ಹೆಂಡ್ತಿಯ ವಿದ್ಯಾಭ್ಯಾಸಕ್ಕಾಗಿ ದುಡಿಯಲು ದುಬೈಗೆ ಹೋದ ಪತಿ; ಮರಳಿ ಬಂದಾಗ ಕೇಳಿದ್ದು ತನ್ನದೇ ಸಾವಿನ ಸುದ್ದಿ….!

0
7887

ಚೆನ್ನೈ ಸಮೀಪದ ಹಳ್ಳಿಯವ ರಾಜೇಶ್. ಬಾಲ್ಯದಲ್ಲೇ ತಂದೆ-ತಾಯಿ,‌ಬಂಧು-ಬಳಗ ಎಲ್ಲರನ್ನೂ ಕಳೆದುಕೊಂಡ ಅನಾಥ.
ಓರ್ವ ಪುಣ್ಯಾತ್ಮ ರಾಜೇಶ್ ಗೆ ಆಶ್ರಯ ನೀಡಿ ಬೆಳೆಸಿ, ಮೆಕಾನಿಕ್ ಶೆಡ್ ನಲ್ಲಿ ಕೆಲಸಕ್ಕೂ ಸೇರಿಸಿದ.‌
ದಿನಗಳು ಕಳೆದಂತೆ ತಾನೇ ಸ್ವತಃ ಒಂದು ಶೆಡ್ ಇಟ್ಟು ಮಾಸಿಕ 15-20 ಸಾವಿರ ರೂ ಸಂಪಾದನೆ‌ ಮಾಡಲಾರಂಭಿಸಿದ.‌ ತಾನಂತೂ ಓದಲಿಲ್ಲ. ಓದಿರುವವಳನ್ನೇ‌ ಮದುವೆಯಾಗಬೇಕು ಎಂದು ಆಸೆಪಟ್ಟಿದ್ದ,ಜೊತೆ ಅವಳಿಷ್ಟದಂತೆ ಓದಿಸಬೇಕೆಂದು ಸಹ ಅಂದುಕೊಂಡಿದ್ದ.

ಅವನ ಆಸೆಯಂತೆ ಡಿಗ್ರಿ ಓದುತ್ತಿದ್ದ ಹುಡುಗಿ ಪತ್ನಿಯಾಗಿ ಬಾಳ ಪಯಣದಿ ಜೊತೆಯಾದಳು. ಮದುವೆಯಾದ ಬಳಿಕ ರಾಜೇಶನೇ ಆಕೆಯನ್ನು ಕಷ್ಟಪಟ್ಟು ಓದಿಸಿದ. ಪದವಿ ಮುಗಿಯಿತು, ಪತ್ನಿ ಮಾಸ್ಟರ್ ಡಿಗ್ರಿ ಮಾಡಬೇಕೆಂದು ಆಸೆಪಟ್ಟಳು. ಹಳ್ಳಿಯಲ್ಲಿದ್ದ ಮೆಕಾನಿಕ್ ಶೆಡ್ ಮಾರಿ ಚೆನ್ನೈನಲ್ಲಿ ಮನೆ ಮಾಡಿ, ಪತ್ನಿಯ ವಿದ್ಯಾಭ್ಯಾಸಕ್ಕೆ ಸಾಥ್ ನೀಡಿದ.‌ ಚೆನ್ನೈ ನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಪತ್ನಿಯನ್ನು ಸ್ನಾತಕೋತ್ತರ ಪದವಿಧರಳನ್ನಾಗಿ ಮಾಡಿದ.


ಮಾಸ್ಟರ್ ಡಿಗ್ರಿ ಮುಗಿದ ಮೇಲೆ ಅಮೆರಿಕಾದಲ್ಲಿ ಒಂದು ಕೋರ್ಸ್ ಮಾಡಿದರೆ ತಿಂಗಳಿ 1 ಲಕ್ಷ ರೂ ಸಂಪಾದಿಸಬಹುದೆಂದಳು ಹೆಂಡ್ತಿ.
ಅದಕ್ಕೂ ಸೈ ಅಂದ…ಇಲ್ಲಿನ ದುಡಿಮೆ ಸಾಕಾಗಲ್ಲ ಎಂದು ಸ್ನೇಹತನ ಸಹಾಯದಿಂದ ದುಬೈಗೆ ಹೋದ.‌ಅಲ್ಲಿ ಒಂದುವರೆ ವರ್ಷ ಕೆಲಸ ಮಾಡಿ ಹಣ ಸಂಪಾದಿಸಿದ.


ನಂತರ ಒಂದು ದಿನ ಇನ್ನೊಂದು ವಾರದಲ್ಲಿ ಬರುತ್ತೇನೆ ಎಂದು ಹೆಂಡ್ತಿಗೆ ಹೇಳಿದ.‌ ಖುಷಿಯಾದ ಹೆಂಡ್ತಿ, ಮೊದಲು ಹಣ ಕಳುಹಿಸಿ, ನಾನು ವೀಸಾಗೆ ಅಪ್ಲೈ ಮಾಡ್ತೀನಿ ಅಂದ್ಲು. ಸರಿ ಅಂತ ನಂಬಿ ಹಣವನ್ನು ಆಕೆ ಅಕೌಂಟ್ ಗೆ ಹಾಕಿದ.
ವಾರದ ಬಳಿಕ ಮನೆಯ ಬಳಿ‌ ಬಂದಾಗ ಪತ್ನಿ ಇರಲಿಲ್ಲ. ಫೋನ್ ಸ್ವಿಚ್ ಆಫ್ ಆಗಿತ್ತು. ಬಾಗಿಲು ಒಡೆದು‌ ಮನೆಯೊಳಗೆ ಹೋದ…ಮನೆಯಲ್ಲಿ ಏನೇನೂ‌ ಇರಲಿಲ್ಲ. ಎಲ್ಲವೂ ಖಾಲಿ ಖಾಲಿ.


ಊರಿಗೆ ಹೋದ….ಈತನನ್ನು ನೋಡಿ ಊರಿನವರು ಶಾಕ್ ಆದ್ರು‌…! ನೀನಿನ್ನೂ ಬದುಕಿದ್ದೀಯ? ನೀನು ದುಬೈನಲ್ಲಿ ಸತ್ತು ಹೋದೆ , ನಿನ್ನ ಶವ ಕೂಡ ಸಿಗಲಿಲ್ಲ ಅಂತ ನಿನ್ನ ಹೆಂಡ್ತಿ ಹೇಳಿದಳಲ್ಲ…? ಎಂದು ಜನ ಹೇಳಿದ್ರು.
ಈ ಮಾತಿನಿಂದ ಮಾನಸಿಕವಾಗಿ ನೊಂದು ಬೆಂದ ರಾಜೇಶ್ ಇಂದು ಹುಚ್ಚನಾಗಿ ಬೀದಿ ಬೀದಿ ಅಲೆಯುತ್ತಿದ್ದಾನೆ…

 

LEAVE A REPLY

Please enter your comment!
Please enter your name here