ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?

ಕರ್ನಾಟಕದಾದ್ಯಂತ ಮದ್ಯಪ್ರಿಯರು ಫುಲ್ ಖುಷಿಯಾಗಿ ಮುಂಜಾನೆಯವರಗೂ ಪಾರ್ಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆದಾಯ ತಂದಿದ್ದಾರೆ. ಬರೋಬ್ಬರಿ ಸುಮಾರು 75 ಕೋಟಿಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟವಾಗಿದೆ. ನಿನ್ನೆ ಒಂದೇ ದಿನ ಭರ್ಜರಿ ಮದ್ಯ ವ್ಯಾಪಾರ ನಡೆದಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ವ್ಯಾಪಾರ ಜೋರಾಗಿದೆ ಎಂದು ಹೇಳಲಾಗಿದೆ.

ನಗರದೆಲ್ಲೆಡೆ ರಾತ್ರಿ ಎರಡು ಗಂಟೆಯವರಗೂ ಮದ್ಯ ಸೇವನೆಗೆ ಅನುಮತಿ ನೀಡುವಂತೆ ಬೇಡಿಕೆ ಬಂದಿತ್ತು. ಅದಕ್ಕೆ ಸ್ಪಂದಿಸಿದ ಬೆಂಗಳೂರು ಪೊಲೀಸರು ಮಧ್ಯರಾತ್ರಿಯವರಗೂ ಅವಕಾಶ ನೀಡಲಾಗಿತ್ತು. ಜೊತೆಗೆ ರಾಜ್ಯಾದ್ಯಂತ ಕೂಡ ಮದ್ಯ ಮಾರಾಟ ಭರ್ಜರಿಯಾಗಿ ನಡೆದಿದೆ.