ಪುನೀತ್ ಕನಸು ಮಾಡಲು ಪತ್ನಿ ಅಶ್ವಿನಿ ಘೋಷಣೆ

0
58

ಪುನೀತ್​ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಮಾಡಿದ್ದಾರೆ. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಇದರ ಟೀಸರ್​ ನವೆಂಬರ್ 1ರಂದು ತೆರೆಗೆ ಬರಬೇಕಿತ್ತು. ನವೆಂಬರ್​ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್​ ಮಾಡಬೇಕು ಎಂದು ಪುನೀತ್​ ಕನಸು ಕಂಡಿದ್ದರು.

ಪುನೀತ್​ ರಾಜ್​ಕುಮಾರ್​ ಅವರು ಅನೇಕ ಕನಸುಗಳನ್ನು ಕಂಡಿದ್ದರು. ಅದೆಲ್ಲವೂ ಪೂರ್ಣಗೊಳ್ಳುವ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದರು. ಈಗ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಹೆಗಲು ಏರಿದೆ. ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಸೇರಿ ಎಲ್ಲ ಉದ್ಯಮಗಳನ್ನು ಅವರೇ ನೋಡಿಕೊಳ್ಳಬೇಕಿದೆ. ಈಗ ಅಶ್ವಿನಿ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್​ ಸಖತ್​ ಖುಷಿಯಾಗಿದ್ದಾರೆ. ಹಾಗಾದರೆ ಏನದು ವಿಚಾರ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್​ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್​ ನವೆಂಬರ್ 1ರಂದು ರಿಲೀಸ್​ ಆಗಬೇಕಿತ್ತು. ನವೆಂಬರ್​ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್​ ಮಾಡಬೇಕು ಎಂದು ಪುನೀತ್​ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅಕ್ಟೋಬರ್​ 29ರಂದು ಪುನೀತ್​ ನಿಧನ ಹೊಂದಿದ್ದರು. ಈ ಕಾರಣಕ್ಕೆ ಆ ಟೀಸರ್​ ರಿಲೀಸ್​ ಆಗಿಲ್ಲ. ಈಗ ಅದನ್ನು ರಿಲೀಸ್​ ಮಾಡುವ ಬಗ್ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಚಿಂತನೆ ಮಾಡಿದ್ದಾರೆ.

 

‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್​ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್​ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು. ಆ ಸಮಯ ಈಗ ಬಂದಿದೆ.

ಈ ವಿಚಾರದ ಕುರಿತು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್​ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here