ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6 ಕೋಟಿ ಕೃಷಿಕ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಡಿಸೆಂಬರ್ 2019 ರಿಂದ ಮಾರ್ಚ್ 2020 ರ ವರೆಗಿನ ಅವಧಿಯ ಕಂತಿಗಾಗಿ 12,000 ಕೋಟಿ ರೂ. ವರ್ಗಾವಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಕೃಷಿ ಕರ್ಮಣ್ ಪ್ರಶಸ್ತಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ, ತಾಂತ್ರಿಕ ದೋಣಿ ಖರೀದಿಗೆ ಹಣಕಾಸು ನೆರವು ಸೇರಿ ಮೀನುಗಾರಿಕೆ ಕ್ಷೇತ್ರಕ್ಕಾಗಿ ಸವಲತ್ತುಗಳ ವಿತರಣೆ ಮಾಡಲಾಗುವುದು. ತುಮಕೂರಿನಲ್ಲಿ ಇಂದು ಮಧ್ಯಾಹ್ನ 3:30 ಕ್ಕೆ ನಡೆಯುವ ಸಮಾರಂಭದಲ್ಲಿ ಮೋದಿ ರೈತರ ಖಾತೆಗೆ ಹಣ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.