ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷದ ಆಚರಣೆ ಬಲು ಜೋರಾಗಿ ನಡೆಯುತ್ತದೆ  ಕೆಲವು ಭಾಗಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಮುಂದಿನ ವರ್ಷ ಆಚರಣೆ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಪೊಲೀಸರು ಎಷ್ಟೇ ಬಿಗಿಯಾದ ಕ್ರಮ ಕೈಗೊಂಡರೂ ಕೆಲವು ಪಾನಮತ್ತರು ದುಂಡಾವರ್ತನೆ ತೋರುವುದರಿಂದ ನಮ್ಮ ರಾಜ್ಯಕ್ಕೂ ಕಳಂಕ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಮತ್ತಿತರ ಕಡೆ ಹೊಸ ವರ್ಷಾಚರಣೆಯ ಅಗತ್ಯವಾದರೂ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಮುಂದಿನ ವರ್ಷದಿಂದ ಹೊಸ ವರ್ಷದ ಆಚರಣೆಯನ್ನು ಎಂಜಿ ರೋಡಿನಲ್ಲಿ ನಡೆಯುತ್ತೋ ಇಲ್ಲವೋ ಎಂಬ ಪ್ರಶ್ನೆ  ಸಾರ್ವಜನಿಕರಲ್ಲಿ ಬಂದಿದೆ ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಚಿಂತನೆಯನ್ನು ನಡೆಸಿದೆ .