ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ

0
52

ಕಳೆದ ಎರಡ್ಮೂರು ದಿನದಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಸುರಿಯಲಿದ್ದಾನೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

ಮತ್ತೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಕಡಲ ತೀರದ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಮತ್ತೆ ವಾಯುಭಾರ ಕುಸಿತವಾಗಲಿದ್ದು, ಈ ಹಿನ್ನೆಲೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರ ಭಾಗಕ್ಕೆ ಇದು ಎಫೆಕ್ಟ್ ಆಗಲಿದ್ದು, ಕರ್ನಾಟಕಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎನ್ನಲಾಗಿದೆ.

ಇನ್ನು ಈ ಮಳೆ ಬಗ್ಗೆ ಮಾತನಾಡಿರುವ ಹವಮಾನ ತಜ್ಞರಾದಂತ ಡಾ. ಆರ್ ಎಚ್ ಪಾಟೀಲ್, ಇನ್ನು ಎರಡು ದಿನ ಬಿಸಿಲು ಬರುವುದು ಕಡಿಮೆ. ಹೀಗೆ ಮೋಡ ಕವಿದ ವಾತಾವರಣ ಎಲ್ಲೆಡೆ ಇರಲಿದೆ. ಆದ್ರೆ ಮಳೆಯಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಈಗಾಗಲೇ ನಿರಂತರವಾಗಿ ಸುರಿದ ಮಳೆಯಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಈಗಾಗಲೇ ಕೈಗೆ ಬರಬೇಕಾಗಿದ್ದ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಹೋಮವಾಗಿದೆ. ಬೆಳೆ ನಾಶದಿಂದಾಗಿ ಸಾಲ ತಲೆ‌ಮೇಲೆ ಬಂದಿದೆ. ಇದರ ನಷ್ಟವನ್ನೇ ರೈತನಿಂದ ತೀರಿಸಲು ಸಾಧ್ಯವಾಗ್ತಾ ಇಲ್ಲ. ಇನ್ನು ಮತ್ತೆ ಮಳೆ ಬಂದರೆ ಇರುವ ಅಷ್ಟೊ ಇಷ್ಟೋ ಬೆಳೆಯೂ ನಾಶವಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆ ಬಾರದೆ ಇದ್ದರೆ ಉತ್ತಮ ಎಂದು ರೈತ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾನೆ.

LEAVE A REPLY

Please enter your comment!
Please enter your name here