ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತದಿಂದ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದ್ದು, ಸದ್ಯ ಲಂಕಾ ಬಿಕ್ಕಟ್ಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ ಎಂದು ಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದರು. ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸದ್ಯ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ. ಮುಂದಿನ ತಿಂಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗತಿಗೆ ಮುಂದುವರಿಯುವ ಸಾಧ್ಯತೆ ಎಂದೂ ಎಚ್ಚರಿಕೆ ನೀಡಿದ್ದರು.
ಹೀಗಾಗಿ ಭಾರತದಿಂದ 2 ಹಂತಗಳಲ್ಲಿ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ವಿಕ್ರಮ ಸಿಂಘೆ, ದೇಶದಲ್ಲಿ ಕೇವಲ ಒಂದು ದಿನದ ಪೆಟ್ರೋಲ್ ಸ್ಟಾಕ್ ಮಾತ್ರ ಉಳಿದಿತ್ತು. ಆದರೆ, ಭಾರತೀಯ ಕ್ರೆಡಿಟ್ ಲೈನ್ ಅಡಿಯಲ್ಲಿ ಮೇ 18 ಮತ್ತು 29 ರಂದು ಬರಲಿದೆ. ಜೂನ್ 1 ರಂದು 2ನೇ ಹಂತವಾಗಿ 2 ಶಿಪ್‌ಮೆಂಟ್ ಪೆಟ್ರೋಲ್ ರಫ್ತಾಗಲಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ. ದೇಶದ ಪರಿಸ್ಥಿತಿ ಸರಿದೂಗಿಸಲು ಸುಮಾರು 75 ಮಿಲಿಯನ್ ಯುಎಸ್ ಡಾಲರ್ ಅವಶ್ಯವಿದೆ. ಹಾಗಾಗಿ ನಾವು ಮುಕ್ತ ಮಾರುಕಟ್ಟೆಯ ಡಾಲರ್‌ಗಳನ್ನು ಪಡೆಯಲು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
Sri Lankan PM Ranil Wickremesinghe informed last night that only a day's petrol stock is left in the country; added, "We managed to bring in a diesel shipment y'day. 2 more diesel shipments under the Indian credit line due on 18/5 & 1/6. 2 petrol shipments due on 18/5 and 29/5." pic.twitter.com/fZGBQUBcAY
— ANI (@ANI) May 17, 2022