ಮನೆಯ ಮಾಳಿಗೆ ಮೇಲೆ ಕೃಷಿ ಮಾಡಿದ ರೈತ..!

0
109

“ಆ ಜಮೀನಿಗೆ ಯಾವುದೇ ಪ್ರಾಣಿಗಳ ಕಾಟವಿಲ್ಲ. ಅದನ್ನು ಹಗಲು ರಾತ್ರಿ ಕಾಯಬೇಕು ಎನ್ನುವ ತಾಪತ್ರಯವಿಲ್ಲ. ಇನ್ನೂ ವಿಶೇಷವೆಂದರೆ ಕಿಲೋ ಮೀಟರ್ ಗಟ್ಟಲೇ ನಡೆಯದೇ ಮೆಟ್ಟಿಲೇರಿದರೆ ಸಾಕು ಜಮೀನಿನ ದರ್ಶನ”. ಇಂತಹ ಅತ್ಯದ್ಭುತ ಸೌಲಭ್ಯಗಳಿರುವ ಜಮೀನನ್ನು ಬಹುಶಃ ಯಾರೂ ಕಂಡಿರಲು ಸಾಧ್ಯವಿಲ್ಲ. ಏಕೆಂದರೆ ಈ ಜಮೀನು ಇರುವುದು ಮನೆಯ ಮಾಳಿಗೆ ಮೇಲೆ..!
ಯೆಸ್.. ಛತ್ತಿಸ್ ಘಡ ರಾಜಧಾನಿ ರಾಯ್ಪುರದಿಂದ 45 ಕಿಲೋ ಮೀಟರ್ ದೂರದಲ್ಲಿರುವ ಮಹಾಸ್ ಮುಂದ್ ಎಂಬ ಗ್ರಾಮದ 73 ವರ್ಷದ ಭಗೀರತಿ ಎಂಬ ರೈತರೊಬ್ಬರು ತಮ್ಮ ಮನೆಯ ಮಾಳಿಗೆ ಮೇಲೆಯೇ ಜಮೀನನ್ನು ಸೃಷ್ಟಿಸಿದ್ದಾರೆ.

ಹೀಗೆ ನಿರ್ಮಾಣವಾಯಿತು ಜಮೀನು..!
ಈ ಜಮೀನಿರುವ ಮನೆಯನ್ನು ಮರಳು ಮತ್ತು ಸಿಮೆಂಟ್ ನಿಂದ ನಿರ್ಮಿಸಲಾಗಿದೆ. ಅದನ್ನು ಕಬ್ಬಿಣ ಮತ್ತು ಕಟ್ಟಿಗೆಯ ಸಹಾಯದಿಂದ ಮತ್ತಷ್ಟು ಸುಭದ್ರವಾಗಿ ಇರುವಂತೆ ಮತ್ತು ನೀರು ಮನೆಯೊಳಗೆ ಬರದಂತೆ ಮಾಳಿಗೆಯನ್ನು ನಿಮರ್ಿಸಲಾಯಿತು. ನಂತರ ಅದರ ಮೇಲೆ 6 ಇಂಚಿನಷ್ಟು ಉತ್ತಮ ಗುಣಮಟ್ಟದ ಮಣ್ಣನ್ನು ತಂದು ಸುರಿಯಲಾಯಿತು.
ಭಗೀರತಿಯವರು 2004ರಲ್ಲಿ ಎಎಫ್ ಸಿಐ ನಿಂದ ರಿಟೈರ್ಡ್ ಆದ ಬಳಿಕ 100 ಫೀಟ್ ನ ಜಮೀನಿನಲ್ಲಿ ಕೃಷಿ ಮಾಡಿ ಯಶಸ್ಸು ಕಂಡರು. ನಂತರ ತಮ್ಮದೇ ಮನೆಯ 3000 ಸ್ಕ್ವೇರ್ ಫಿಟ್ ನ ಮಾಳಿಗೆಯ ಮೇಲೆ ಕೃಷಿ ಮಾಡಲಾರಂಭಿಸಿದರು. ಈ ಜಮೀನಿನಲ್ಲಿ ಒಂದು ಬಾರಿಗೆ ಬರೋಬ್ಬರಿ 2 ಕ್ವಿಂಟಾಲ್ ಧಾನ್ಯವನ್ನು ಬೆಳೆಯಲಾಗುತ್ತಿದೆ. ಅಚ್ಚರಿ ಎಂದರೆ ಈ ಕೃಷಿ ಮಾದರಿಯು ವೈಜ್ಞಾನಿಕ ಲೋಕವನ್ನೇ ದಂಗುಬಡಿಸಿದೆ.
ಭಗೀರತಿಯವರು ಈ ಜಮೀನಿನಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅದರಲ್ಲೂ ಬದನೆಕಾಯಿ, ಟೊಮ್ಯಾಟೋ, ಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲದೇ ಹೂಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯವನ್ನೂ ಗಳಿಸುತ್ತಿದ್ದಾರೆ.


ಭಗೀರತಿಯವರ ಕುಟುಂಬದಲ್ಲಿ ಅವರ ಪತ್ನಿ ಮತ್ತು ಪುತ್ರ ಮಾತ್ರವೇ ಇದ್ದಾರೆ. ಅವರು ಬೆಳೆಯುವ ಬೆಳೆ ಅವರ ಕುಟುಂಬಕ್ಕೆ ಸಾಕಾಗುವಷ್ಟು ದೊರೆಯುತ್ತದೆ. ಇನ್ನುಳಿದ ತರಕಾರಿಯನ್ನು ಮಾರುತ್ತಾರೆ.
ಚೀನಾದ ಜಿಜಿಯಾಂಗ್ ಪ್ರಾಂತದ ಶಾವೋಜಿಂಗ್ ನ ಪೆಂಗ್ ಕುಯಿಜೆಂಗ್ ಎಂಬುವವರೂ ಕೂಡಾ ಇದೇ ಮಾದರಿಯ ಕೃಷಿಯನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ ಅವರು ದೊಡ್ಡ ಮಟ್ಟದಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಭಗೀರತಿಯವರು ತಮ್ಮ ಅಗತ್ಯಕ್ಕೆ ತಕ್ಕಂತೆ ಕೃಷಿ ಮಾಡುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here