ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!

ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸಬೇಕು ಎಂದು ಪುಣೆಯ ಪ್ರತಿಷ್ಠಿತ ಶಾಲೆಯೊಂದು ಹೊಸ ವಸ್ತ್ರ ನಿಯಮ ಜಾರಿ ಮಾಡಿದೆ.
ಪುಣೆಯ ಮಯೀರ್ ಎಂಐಟಿಯ ಶಾಲೆ ಈ ರೀತಿ ಹೊಸ ನಿಯಮ ಜಾರಿ ಮಾಡಿರೋದು. ವಿದ್ಯಾರ್ಥಿನಿಯರು ಬಿಳಿ ಬಣ್ಣದ ಅಥವಾ ಚರ್ಮದ ಬಣ್ಣದ ಒಳ ಉಡುಪುಗಳನ್ನು ಧರಿಸಿ ಶಾಲೆಗೆ ಬರಬೇಕು ಎಂದು ಆದೇಶಿಸಿದೆ.

ಧರಿಸಬೇಕಾದ ಸ್ಕರ್ಟ್ ನ ಉದ್ದವನ್ನು ಸಹ ಶಾಲೆ ಅವರೇ ಉಲ್ಲೇಖಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿನಿಯರು ಮತ್ತು ಪೋಷಕರು, ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.