ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಈ ಭೂಮಿಯ ಮೇಲೆ ತಾಯಿಯನ್ನು ಸೃಷ್ಟಿ ಮಾಡಿದನಂತೆ. ಹೌದು ಅಮ್ಮ ಎಂದರೆ ಅದು ಯಾವ ದೇವರಿಗೂ ಕಮ್ಮಿಯಿಲ್ಲ. ತಾಯಿ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ತನ್ನ ಮಕ್ಕಳ ಬಳಿ ಯಾವ ಅಪಾಯವೂ ಸುಳಿಯದಂತೆ ನೋಡಿಕೊಳ್ಳುತ್ತಾಳೆ.
ಯಾವುದೇ ಆಪತ್ತು ಮಕ್ಕಳ ಬಳಿ ಬರುತ್ತಿದೆ ಎಂದು ಗೊತ್ತಾದಾಗ ತನ್ನೆಲ್ಲಾ ಶಕ್ತಿಯನ್ನು ಹಾಕಿ ತನ್ನ ಮಗುವಿನ ರಕ್ಷಣೆಗೆ ನಿಲ್ಲುತ್ತಾಳೆ ತಾಯಿ. ಅದು ಮನುಷ್ಯರಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ.
ಮಕ್ಕಳ ವಿಚಾರ ಬಂದಾಗ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡಿ ಬಿಡುತ್ತಾಳೆ ತಾಯಿ. ತಾಯಿ ತನ್ನ ಮಗುವಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾಳೆ ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆಯಾಗಿದೆ. ಅದರಲ್ಲಿ ಇಲಿಯೊಂದು ತನ್ನ ಮರಿಯನ್ನು ಉಳಿಸಲು ದೊಡ್ಡ ವಿಷಪೂರಿತ ಹಾವಿನೊಂದಿಗೆ ಹೋರಾಡುತ್ತದೆ.
ತನ್ನ ಮರಿಯನ್ನು ಆಹಾರವಾಗಿಸಲು ಸರ್ಪ ಕೊಂಡೊಯ್ಯುತ್ತಿದೆ ಎಂದು ತಾಯಿ ಇಲಿಗೆ ತಿಳಿದಿದ್ದೇ ತಡ ಒಂದು ಕ್ಷಣವನ್ನು ಆ ತಾಯಿ ವ್ಯರ್ಥ ಮಾಡಲಿಲ್ಲ. ಚಂಗನೆ ಹಾರುತ್ತಾ ಬಂದು ಸರಸರನೇ ಹರಿದಾಡುತ್ತಿದ್ದ ಸರ್ಪದ ಮೇಲೆರಗಿದೆ. ಆ ವಿಡಿಯೋ ಇಲ್ಲಿದೆ ನೋಡಿ
Fight for survival and life is basic instinct every species in #nature #SurvivalOfFittest @ipskabra
Via:@IfsSamrat pic.twitter.com/QcUsgP7eLX
— Surender Mehra IFS (@surenmehra) January 22, 2022