ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

0
178

ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ. ಕಳೆದವಾರ 106 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿ 105 ಪಾಯಿಂಟ್ ಪಡೆದಿದೆ.


ಕಳೆದವಾರ 69 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಪಬ್ಲಿಕ್ ಟಿವಿ, ಈ ವಾರವೂ ಎರಡನೇ ಸ್ಥಾನದಲ್ಲಿದ್ದು, 75 ಪಾಯಿಂಟ್ ಪಡೆದಿದೆ.  48 ಪಾಯಿಂಟ್‍ಗಳಿಸಿರುವ ಸುವರ್ಣ ನ್ಯೂಸ್ 3ನೇ ಸ್ಥಾನದಲ್ಲಿದ್ದು, ಇದು ಕಳೆದವಾರ 43 ಪಾಯಿಂಟ್ ಗಳಿಸಿತ್ತು. ನ್ಯೂಸ್ 18ಕನ್ನಡ ಕಳೆದವಾರ 32 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿತ್ತು. ಈ ವಾರವೂ ಸ್ಥಾನದಲ್ಲಿ ಯಾವುದೇ ಪಲ್ಲಟವಾಗಿಲ್ಲ. ಈ ವಾರವೂ ಕಳೆದವಾರದಂತೆ 32 ಪಾಯಿಂಟ್ ಗೆ ತೃಪ್ತಿ ಪಟ್ಟಿದೆ.


ಇನ್ನುಳಿದಂತೆ ಬಿಟಿವಿ 27 ಪಾಯಿಂಟ್ (ಕಳೆದವಾರ 25), ಪ್ರಜಾ ಟಿವಿ 17 (ಕಳೆದವಾರವೂ 17), ದಿಗ್ವಿಜಯ 16 ಪಾಯಿಂಟ್ (ಕಳೆದ ವಾರವೂ 16), ಕಸ್ತೂರಿ 9 ಪಾಯಿಂಟ್ (ಕಳೆದ ವಾರ 7), ಸುದ್ದಿ 8 ಪಾಯಿಂಟ್ (ಕಳೆದವಾರ 7), ರಾಜ್ ನ್ಯೂಸ್ 9 (ಕಳೆದವಾರ 7) ಪಾಯಿಂಟ್ ಪಡೆದಿವೆ.  ಹೊಸ ಸುದ್ದಿವಾಹಿನಿ ಟಿ5 ರೇಟಿಂಗ್ ಲೀಸ್ಟ್ ಗೆ ಇನ್ನೂ ಸೇರ್ಪಡೆಯಾಗಿಲ್ಲ.

LEAVE A REPLY

Please enter your comment!
Please enter your name here