ಸ್ಕೂಟರ್ ವೊಂದು ಇದ್ದಕ್ಕಿದ್ದಂತೆಯೇ ರೌಂಡ್ ಬರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಹೌದು ದೃಶ್ಯವನ್ನು ನೆಟ್ಟಿಗರು ಅಕ್ಷರಶಃ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದಾರೆ. ಕೆಲವರು ಈ ವಿಡಿಯೋವನ್ನು ಎರಡೆರಡು ಸಲ ನೋಡಿದರೂ ಅಚ್ಚರಿಯೇನೂ ಇಲ್ಲ. ಪಾರ್ಕಿಂಗ್ ಲಾಟ್‌ನಲ್ಲಿ ಸ್ಕೂಟರ್ ನಿಲ್ಲಿಸಿದ್ದ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಸ್ಕೂಟರ್ ಹಿಮ್ಮುಖವಾಗಿ ಚಲಿಸಿದಂತೆ ಕಾಣುತ್ತದೆ. ಹೀಗೆ ಚಲಿಸುವ ಸ್ಕೂಟರ್ ಹಿಮ್ಮುಖವಾಗಿಯೇ ಒಂದು ಸುತ್ತು ಸುತ್ತುತ್ತದೆ. ಇದಾದ ಬಳಿಕ ಸ್ಕೂಟರ್ ವಾಹನವೊಂದರ ಬಳಿ ಬಂದು ನಿಲ್ಲಿಸುವುದು ಕಾಣಿಸುತ್ತದೆ.
ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ. ಸದ್ಯ ಈ ಅಷ್ಟೂ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಬಹುತೇಕರು ಇದು ಹೇಗೆ ಸಾಧ್ಯ ಎಂದು ಪದೇ ಪದೇ ಈ ದೃಶ್ಯವನ್ನು ನೋಡುತ್ತಿದ್ದಾರೆ.
View this post on Instagram