ಇಂದು ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಬ್ಬರದ ಪ್ರಚಾರ

By
1 Min Read

ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜ್ಯದಲ್ಲಿ ಪ್ರಚಾರದ ಭರಾಟೆ ಕೂಡ ತೀವ್ರವಾಗಿದೆ.. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 1.20ಕ್ಕೆ ಹೆಚ್ಎಎಲ್ ಏರ್ಪೋರ್ಟ್‌ಗೆ ಆಗಮಿಸಲಿದ್ದು, 2 ಗಂಟೆಗೆ ಮಂಡ್ಯಗೆ ತೆರಳಿದ್ದಾರೆ. ಬಳಿಕ ಮಂಡ್ಯದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ..
ಬಳಿಕ 4 ಗಂಟೆಗೆ ಕೋಲಾರದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಬಿರು ಬಿಸಿಲಿನ ಜೊತೆ ಚುನಾವಣಾ ಕಾವು ಕೂಡ ಏರುತ್ತಿದೆ.. ಇದರ ಜೊತೆ ಜೊತೆಗೆ ನಾಯಕರ ವೈಯಕ್ತಿಕ ಜಟಾಪಟಿಯೂ ಜೋರಾಗಿದೆ. ಆದ್ರೆ ಮತದಾರ ಪ್ರಭುವಿನ ಚಿತ್ತ ಮಾತ್ರ ಯಾರತ್ತ ನೆಟ್ಟಿದೆ ಎಂಬುದು ಫಲಿತಾಂಶದ ದಿನವೇ ತಿಳಿಯಬೇಕಿದೆ.

Share This Article