ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು; ಕುಮಾರಸ್ವಾಮಿ

By
1 Min Read

ಬೆಂಗಳೂರು: ಬೆಸ್ಕಾಂ ಇಲಾಖೆ ಅಧಿಕಾರಿಗಳು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಬೆಸ್ಕಾಂ ಲೆಕ್ಕಾಚಾರ ಪ್ರಕಾರ 2.5 ಕಿ.ವ್ಯಾ ಬಳಕೆ ಆಗಿದೆ ಅಂತ ಇದೆ. ಬೆಸ್ಕಾಂ ಇಲಾಖೆ 2,526 ರೂಪಾಯಿ ಫೈನ್ ಹಾಕಬೇಕಿತ್ತು. ಆದರೆ 68,526 ರೂಪಾಯಿ ದಂಡ ವಿಧಿಸಿದ್ದಾರೆ. ನಮ್ಮ ಮನೆಗೆ 33 ಕಿಲೋ ವ್ಯಾಟ್ ವಿದ್ಯುತ್ ಬಳಕೆಗೆ ಅನುಮತಿ ಇದೆ ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮನೆಗೆ ತೆಗೆದುಕೊಂಡಿರುವ 33 ಕೆವಿ ಸೇರಿ 68 ಸಾವಿರ ರೂ. ಹಾಕಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು?. ನಾನು ವಿದ್ಯುತ್ ಮಹಜರು ಕಾಪಿ ನೀಡುವಂತೆ ಕೇಳಿದ್ದೇನೆ. ನನಗೆ ಕರೆಂಟ್ ಕಳ್ಳ ಅಂತ ಲೇಬಲ್ ಬೇರೆ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

Share This Article