ಕಾಣದ ಕೈಯಲಿ ಗೊಂಬೆ ನೀನು; ಗೆಳೆಯ ಅಪ್ಪು ನೆನೆದು ದರ್ಶನ್ ಭಾವುಕ

admin
1 Min Read

ಕಾಣದ ಕೈಯಲಿ ಗೊಂಬೆಯು ನೀನು, ಹಣೆಬರಹ ತಿದ್ದುವರಾರಿಲ್ಲ ಎಂಬ ಸಾಲುಗಳು ತಮ್ಮನ್ನು ಕಾಡುತ್ತಿರುವುದಾಗಿ ನಟ ದರ್ಶನ್ ಹೇಳಿದ್ದಾರೆ.

ಪುನೀತ ನುಡಿನಮನ ಉದ್ದೇಶಿಸಿ ಮಾತನಾಡಿ, ಅಪ್ಪು ಈ ಸಮಾಜಕ್ಕೆ ಮಾಡುವ ಕೆಲಸಗಳು ಇನ್ನಷ್ಟು ಇದ್ದವು.

ಆದರೆ ಬ್ರಹ್ಮದೇವ ಹಣೆಬರಹ ತಿದ್ದಲಿಲ್ಲ. ಆಯುಷ್ಯ ಹೆಚ್ಚಿಸಲಿಲ್ಲ ಎಂದು ಅಲವತ್ತುಕೊಂಡರು. ಪುನೀತ್ ರಾಜ್ ಕುಮಾರ್ ಅವರ ಕಲೆ, ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸಿಕೊಂಡು ಸಾಗಬೇಕಿದೆ ಎಂದು ದರ್ಶನ್ ನುಡಿ ನಮನದಲ್ಲಿ ತಿಳಿಸಿದರು.

ಮೈಸೂರು ಅರಮನೆಗೂ ಡಾ. ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಪುನೀತ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಡಾ. ರಾಜ್ ಅವರ ಐತಿಹಾಸಿಕ ಚಿತ್ರಗಳು ನಮ್ಮ ರಾಜವಂಶದ ಬಗೆಗಿನ ಕುತೂಹಲವನ್ನು ಹೆಚ್ಚಿಸಿತು ಎಂದರು. ಪುನೀತ್ ಅಗಲಿಕೆಯ ಸುದ್ದಿ ಅರಮನೆಗೆ ದುಃಖ ತಂದಿತ್ತು. ಇಂತಹ ನೋವನ್ನು ಭರಿಸುವ ಶಕ್ತಿಯನ್ನು ಡಾ. ರಾಜ್ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಆಶಿಸಿದರು.

 

 

Share This Article
Leave a Comment