ಕಾವೇರಿ ಜಲವಿವಾದದ ಬಗ್ಗೆ ಕುಮಾರಸ್ವಾಮಿ ಯಾವತ್ತೂ ಗಂಭೀರವಾಗಿಲ್ಲ !

tnit editors
1 Min Read

ಬೆಂಗಳೂರು: ಕಾವೇರಿ ಜಲವಿವಾದದ ಬಗ್ಗೆ ಕುಮಾರಸ್ವಾಮಿ ಯಾವತ್ತೂ ಗಂಭೀರವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ನಿನ್ನೆ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಸಿದ್ದರಾಮಯ್ಯ ಕರೆದ ಸರ್ವಪಕ್ಷ ಸಭೆಗೆ ಬಾದಾಮಿ ಗೋಡಂಬಿ ತಿನ್ನೋದಿಕ್ಕೆ ಹೋಗಬೇಕಿತ್ತಾ ಅಂತ ಹೇಳಿರುವುದಕ್ಕೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಅವರ ಪಕ್ಷದವರು ಗೋಡಂಬಿ ತಿನ್ನಲು ಹಾಜರಾಗಿದ್ರಾ? ಅಸಲು ವಿಷಯವೇನೆಂದರೆ ಕಾವೇರಿ ಜಲವಿವಾದದ ಬಗ್ಗೆ ಕುಮಾರಸ್ವಾಮಿ ಯಾವತ್ತೂ ಗಂಭೀರವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಇನ್ನೂ  ಕರ್ನಾಟಕ ಸರ್ಕಾರದ ಹಾಗೆಯೇ ತಮಿಳುನಾಡು ಸರ್ಕಾರ ಸಹ ಕಾವೇರಿ ನೀರಿಗೆ ಸಂಬಂಧಿಸಿದತೆ ಸರ್ವಪಕ್ಷ ಸಭೆ ಕರೆದಿದೆ, ಅದರಿಂದ ತಮಗೇನೂ ಅಭ್ಯಂತರವಿಲ್ಲ, ಕಾವೇರಿ ಜಲ ನಿರ್ವಹಣಾ ಸಮಿತಿಯ ಸೂಚನೆ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿ ಕಾವೇರಿ ನದಿಗೆ ಒಳಹರಿವು ಹೆಚ್ಚಾಗಿದೆ, ಹೆಚ್ಚುವರಿ ನೀರನ್ನ ಬಿಳಿಗುಂಡ್ಲುಗೆ ಹರಿಬಿಡುವ ಏರ್ಪಾಟು ಮಾಡಲಾಗಿದೆ ಅಂತ ಹೇಳಿದರು.

Share This Article