ಬಳ್ಳಾರಿ:- ಜನಾರ್ದನ ರೆಡ್ಡಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ ಎಂದು ನಾಗೇಂದ್ರ ಹೇಳಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿರುವ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ್ ಅವರ ಕೇಸ್ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ.
ಆ ಕೇಸ್ ಗಳು ಸೂಕ್ತ ರೀತಿಯಲ್ಲಿ ಆಗಿಲ್ಲ. ಸ್ಪೀಕರ್ ಅವರ ಪರ್ಮಿಷನ್ ತೆಗೆದುಕೊಂಡಿಲ್ಲ. ಅವತ್ತಿನ ಸಂದರ್ಭದಲ್ಲಿ ಡಿಕೆಶಿ ಅವರನ್ನ ಒಳಗೆ ಹಾಕಿದ್ರೆ ಸಾಕು ಎನ್ನುವಂತೆ ಇತ್ತು. ಹೀಗಾಗಿ ತರಾತುರಿಯಲ್ಲಿ ನಿಯಮ ಪಾಲಿಸದೇ ಯಡವಟ್ಟು ಮಾಡಿದ್ದಾರೆ. ಹೀಗಾಗಿ ನಾವು ಈಗ ಪರಿಶೀಲಿಸಿ, ಅಡ್ವಕೇಟ್ ಜನರಲ್ ಅವರ ಬಳಿ ಲೀಗಲ್ ಒಪಿನಿಯನ್ ಪಡೆದು ಮುಂದುವರೆದಿದ್ದೇವೆ’ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ !
