ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ ಭೇಟಿ

tnit editors
1 Min Read

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ ಭೇಟಿ

ರಾಯಚೂರು: ರಾಜ್ಯದಲ್ಲಿ ‘ನವೆಂಬರ್ ಕ್ರಾಂತಿ’ ಚರ್ಚೆ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ “ಟೆಂಪಲ್ ರನ್” ಗೆ ಸಿದ್ಧರಾಗಿದ್ದಾರೆ. ನಾಳೆ ಮಂತ್ರಾಲಯ ಸೇರಿದಂತೆ ರಾಯಚೂರಿನ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಕುಟುಂಬ ಸಮೇತರಾಗಿ ಡಿಕೆಶಿ ರಾಯರ ಮಠ ಹಾಗೂ ಇತರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಯಾವುದೇ ರಾಜಕೀಯ ಅಥವಾ ಸರ್ಕಾರಿ ಕಾರ್ಯಕ್ರಮವಿಲ್ಲದೆ ಒಂದು ದಿನ ಸಂಪೂರ್ಣವಾಗಿ ಭಕ್ತಿ-ಪರ ಯಾತ್ರೆಗೆ ಮೀಸಲಿಟ್ಟಿದ್ದಾರೆ.

ಬೆಳಗ್ಗೆ 8 ಗಂಟೆಗೆ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ.

ಬೆಳಗ್ಗೆ 10ಕ್ಕೆ ರಾಯಚೂರು ತಾಲೂಕಿನ ಬಿಚ್ಚಾಲಿಯಲ್ಲಿರುವ ರಾಯರ ಏಕಾಶಿಲಾ ವೃಂದಾವನ ಹಾಗೂ ಬಿಚ್ಚಾಲಮ್ಮ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ.

ಅದೇ ದಿನ ಬೆಳಗ್ಗೆ 11ಕ್ಕೆ ಗಾಣಧಾಣದಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ನಂತರ ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1ರಿಂದ ಸಂಜೆ 6:55ರವರೆಗೆ ಮಂತ್ರಾಲಯದಲ್ಲಿ ಉಳಿಯಲಿರುವ ಡಿಕೆಶಿ ಬಳಿಕ ರೈಲಿನ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.

Share This Article