ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

Date:

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ: ದುಬೈ ವಿಮಾನ ನಿಲ್ದಾಣದ ಸಮೀಪದಲ್ಲಿ ಡ್ರೋನ್ ದಾಳಿ ನಡೆದ ಪರಿಣಾಮ ಇಂಧನ ಟ್ಯಾಂಕ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸೋಮವಾರ ಸಂಭವಿಸಿದ ಈ ಘಟನೆಯಲ್ಲಿಇರಾನ್ ಮೂಲದ ಡ್ರೋನ್ ಇಂಧನ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ತುರ್ತು ಸೇವಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿವೆ.

ಬೆಂಕಿಯನ್ನು ನಂದಿಸಲು ದುಬೈ ನಾಗರಿಕ ರಕ್ಷಣಾ ಸಿಬ್ಬಂದಿಯನ್ನ ತಕ್ಷಣ ನಿಯೋಜಿಸಲಾಗಿದೆ. ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ದುಬೈ ಮಾಧ್ಯಮ ಕಚೇರಿ  X ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಡ್ರೋನ್ ದಾಳಿಯಿಂದ ಇಂಧನ ಟ್ಯಾಂಕ್‌ಗೆ ಹಾನಿಯಾಗಿತ್ತು. ತುರ್ತು ಸೇವಾ ತಂಡಗಳು ತಕ್ಷಣ ಪ್ರತಿಕ್ರಿಯಿಸಿ ಬೆಂಕಿಯನ್ನು ನಂದಿಸುವ ಕಾರ್ಯ ಕೈಗೊಂಡಿದ್ದು, ಇದೀಗ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದೆ.

Share post:

Subscribe

spot_imgspot_img

Popular

More like this
Related

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ ಮಕ್ಕಳು ಆರೋಗ್ಯವಾಗಿಯೂ ಸದೃಢವಾಗಿಯೂ...

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ: ಮೇ 4ಕ್ಕೆ ಫಲಿತಾಂಶ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ: ಮೇ 4ಕ್ಕೆ ಫಲಿತಾಂಶ ನವದೆಹಲಿ:...

ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ!

Anushka Shetty: ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ! ಸೌತ್ ಇಂಡಿಯಾದ...

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು ಮಹಿಳೆಯರ ಜೀವನ ಕಾರ್ಯಭಾರಗಳಿಂದ...