ದೇಶಕ್ಕೆ ಒಳ್ಳೆಯದಾಗುವುದೆಲ್ಲವನ್ನೂ ಕಾಂಗ್ರೆಸ್ ವಿರೋಧಿಸುತ್ತದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಪ್ರತಿಪಕ್ಷದವರು ಹತಾಶರಾಗಿ ಎಲ್ ಪಿ ಜಿ ಸೇರಿದಂತೆ ಎಲ್ಲದರಲ್ಲಿಯೂ ರಾಜಕಾರಣ ಮಾಡಲು ಬಯಸುತ್ತಾರೆ. ಯುದ್ದದಿಂದ ಇಡೀ ವಿಶ್ವದಲ್ಲಿ ಸಮಸ್ಯೆಯಾಗಿದೆ. ಜನರು ಆತಂಕಕ್ಕೆ ಒಳಗಾಗದಿದ್ದರೆ ಎಲ್ ಪಿಜಿ ಸಮಸ್ಯೆ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ ಪಿಜಿ ಸಮಸ್ಯೆ ಎಲ್ಲ ರಾಜ್ಯಗಳಲ್ಲಿ ಇದೆ. ಕತಾರ ಮತ್ರು ಅರೆಬಿಯನ್ ರಾಷ್ಟ್ರಗಳಿಂದ ಬರುತ್ತದೆ. ಆ ರಾಜ್ಯಗಳಿಂದ ಬರದಿರುವ ದಾರಿಯಿಂದ ನಾಲ್ಕೈದು ದೇಶಗಳ ಜೊತೆ ಸಂಪರ್ಕ ಮಾಡಿದ್ದಾರೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಇಲ್ಲ.
ಎಲ್ಲ ರಾಜ್ಯಗಳಿಗೂ ಸಮಸ್ಯೆ ಇದೆ. ಇದು ವಿಶ್ವದ ಸಮಸ್ಯೆ. ಇದು ಎಲ್ಲರೊಗೂ ಗೊತ್ತಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಭಾರತ ಸರ್ಕಾರದ ರಾಜತಾಂತ್ರಿಕ ನಡೆಯಿಂದಾಗಿ ಭಾರತಕ್ಕೆ ಕಚ್ಚಾ ತೈಲ ನಿರಂತರವಾಗಿ ಸರಬರಾಜಾಗುತ್ತಿದೆ. ಬೇರೆ ಯಾವುದೇ ದೇಶಗಳಿಗೂ ಈ ಅವಕಾಶ ಸಿಕ್ಕಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷದವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕಿತ್ತು ಎಂದು ಹೇಳಿದರು.
ನಾನು ಅವರಿಗೆ ಒಂದು ನೆನಪಿಸಲು ಬಯಸುತ್ತೇನೆ. ಇರಾಕ್ ಯುದ್ದದ ಸಂಸದರ್ಭದಲ್ಲಿ ಅವರು ಅಧಿಕಾರದಲ್ಲಿದ್ದರು. ಆಗ ಕೇಂದ್ರ ಸಚಿವರಾಗಿದ್ದ ಎ.ಕೆ. ಆ್ಯಂಟೋನಿ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ಪೆಟ್ರೊಲ್ ತೆರೆಯಬಾರದು ಎಂದು ಆದೇಶ ಮಾಡಿದ್ದರು. ಆಗ ಪೆಟ್ರೋಲ್ ಬಂಕ್ ಗಳ ಮುಂದೆ ದೊಡ್ಡ ಪ್ರಮಾಣದ ಕ್ಯೂ ಇರುತ್ತಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕಾರಣ ಅಂತಹ ಪರಿಸ್ಥಿತಿ ಇಲ್ಲ. ಅಲ್ಲದೇ ಶೇ 25% ಆಂತರಿಕ ಉತ್ಪಾದನೆಯನ್ನು ಹೆಚ್ಚಳ ಮಾಡಿದ್ದಾರೆ. ಜನರು ಆತಂಕಕ್ಕೆ ಒಳಗಾಗದಿದ್ದರೆ ಯಾವುದೇ ರೀತಿಯ ಸಮಸ್ಯೆಯಾವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಜನಾಭಿಪ್ರಾಯ ಸೃಷ್ಟಿಸಲು ಪ್ರಯತ್ನ ಮಾಡುತ್ತಿದಿಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದು ದೇಶದ ಪರವಾಗಿರುತ್ತದೆ. ಅದು ಕಾಂಗ್ರೆಸ್ ವಿರೋಧಿಯಾಗಿರುತ್ತದೆ. ದೇಶಕ್ಕೆ ಒಳ್ಳೆಯದಾಗುವುದೆಲ್ಲವನ್ನೂ ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದರು.






