ನನ್ನ ಮಗ ಕಾರಿನಲ್ಲೇ ಇರಲಿಲ್ಲ, FIR ಯಾಕೆ: ಲಕ್ಷ್ಮಣ್ ಸವದಿ

admin
1 Min Read

ತಮ್ಮ ಪುತ್ರನ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಎಂ ಲಕ್ಷ್ಮಣ ಸವದಿ, “ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಅದಕ್ಕೆ FIRನಲ್ಲಿ ಆತನ ಹೆಸರಿಲ್,” ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, “ಅಪಘಾತ ಅಪಘಾತವೇ, ಈ ಬಗ್ಗೆ ಯಾವುದೇ ಗೊಂದಲ‌ ಬೇಡ. ಆದರೆ ಅಪಘಾತವಾದ ಕಾರಿನಲ್ಲಿ ನನ್ನ ಮಗ ಇದ್ದರೂ, ಅಪಘಾತ ಮಾಡು ಅಂತಾ ಹೇಳುತ್ತಿರಲಿಲ್ಲ,” ಎಂದರು.


“ನನ್ನ ಮಗ ತುರ್ತಾಗಿ ಗಾಯಗೊಂಡವರ ನೆರವಿಗೆ ಧಾವಿಸಿದ್ದಾನೆ. ಆದರೆ ಅವರು ಬದುಕಿ ಉಳಿದಿಲ್ಲ. ಎರಡು ದಿನದ ನಂತರ ಮೃತರ ಮನೆಗೆ ನಾನೂ ಭೇಟಿ ನೀಡುತ್ತೇನೆ. ಅವರಿಗೆ ಸಾಂತ್ವನ ಹೇಳಿ, ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಮೃತರ ಮನೆಗೆ ಭೇಟಿ‌ ನೀಡಿ ಸಾಂತ್ವನ ಹೇಳುವುದು ನನ್ನ ಕರ್ತವ್ಯ,” ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮೈಸೂರಿನಲ್ಲಿ ಹೇಳಿದ್ದಾರೆ.

 

Share This Article
Leave a Comment