ನಾನು ಕಾಂಗ್ರೆಸ್ʼಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್ಗೆ ಹೇಳಿದ್ದೇನೆ: ಜಿ.ಟಿ.ದೇವೇಗೌಡ

By
0 Min Read

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ ಭೇಟಿ ವಿಚಾರ ಸಂಬಂಧ ಸದಾಶಿವನಗರದಲ್ಲಿ ಅವರೇ ಬಂದು ನನ್ನನ್ನು ಭೇಟಿ ಮಾಡಿದ್ರು. ಭೇಟಿ ವೇಳೆ ಎಸ್.ಟಿ.ಸೋಮಶೇಖರ್ ಸೇರಿ ಹಲವರು ಇದ್ದರು ಎಂದು ಬೆಂಗಳೂರಿನಲ್ಲಿ ಟಿವಿ9ಗೆ JDS ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಈ ಹಿಂದೆ ಪಕ್ಷಕ್ಕೆ ಕರೆದರೂ ಯಾಕೆ ಬರಲಿಲ್ಲ ಎಂದು ಹೇಳಿದ್ರು.
ಅದೃಷ್ಟ ಇರುವವರಿಗೆ ಅಧಿಕಾರ ಸಿಗುತ್ತೆ, ಇಲ್ಲಂದ್ರೆ ಸಿಗಲ್ಲ ಅಂದೆ. ನಾನು ಕಾಂಗ್ರೆಸ್ಗೆ ಹೋಗುವ ಪರಿಸ್ಥಿತಿ ಇಲ್ಲ. ನಾನು ಕಾಂಗ್ರೆಸ್ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್ಗೆ ಹೇಳಿದ್ದೇನೆ. ಜೆಡಿಎಸ್ನ 19 ಶಾಸಕರೂ ಒಟ್ಟಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ಪಕ್ಷವನ್ನು ಒಡೆಯುವ ಕೆಲಸ ಮಾಡಲ್ಲ ಎಂದರು.

Share This Article