ನೀವು ಬೆತ್ತಲಾದ್ರೆ ಭಾರತ ಸೋಲುತ್ತೆ : ಗಂಡನಿಗೆ ಪೂನಂ ಟಾಂಗ್

Date:

ನಟಿ, ಮಾಡೆಲ್ ಪೂನಂ ಪಾಂಡೆ ಅವರು ವಿವಾದಾತ್ಮಕ ಹೇಳಿಕೆ ನೀಡೋದರಲ್ಲಿ, ವಿವಾದ ಮಾಡಿಕೊಳ್ಳೋದರಲ್ಲಿ ಎತ್ತಿದ ಕೈ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ, ವಿಡಿಯೋ ಅಪ್‌ಲೋಡ್ ಮಾಡಿ ಪಡ್ಡೆಹುಡುಗರ ನಿದ್ದೆಗೆಡಿಸುವ ಪೂನಂ ಪಾಂಡೆ ಹಾಗೂ ಅವರ ಪತಿ ಕೂಡ ಈಗ ಬೆತ್ತಲಾಗುವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
2011ರಲ್ಲಿ ಏಕದಿನ ವಿಶ್ವಕಪ್ ವೇಳೆ ಭಾರತ ತಂಡ ಪ್ರಶಸ್ತಿ ಗೆದ್ದರೆ ಬೆತ್ತಲಾಗುವೆ ಎಂದು ಹೇಳಿಕೆ ನೀಡಿದ್ದ ಪೂನಂ ಪಾಂಡೆ ಅವರು ಮತ್ತೆ ಬೆತ್ತಲಾಗುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ವಿಶ್ವಕಪ್ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡುತ್ತಿರುವ ವೇಳೆ ವಿರಾಟ್ ಕೊಹ್ಲಿ ತಂಡಕ್ಕೆ ಈಗ ಆಫರ್ ನೀಡಿದ್ದಾರೆ.


2011ರ ಏಕದಿನ ವಿಶ್ವಕಪ್‌ ಸಮಯದಲ್ಲೂ ನಗ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. “ಕ್ರಿಕೆಟ್ ಆರಂಭವಾಗಿದೆಯಾ? ಭಾರತ ಈ ವೇಳೆ ಗೆದ್ದರೆ ನಾನು ಮತ್ತೆ ಬೆತ್ತಲಾಗಬೇಕಾ? ನನಗೆ ಇದರ ಸುಳಿವೇ ಇಲ್ಲ. ಕಾಂಟ್ರವರ್ಸಿ ಏನಾದರೂ ಮಾಡಲಾಗುವುದೇ ಎಂದು ನಾನು ಮನೆಗೆ ಹೋಗಿ ಚೆಕ್ ಮಾಡುವೆ” ಎಂದು ಪೂನಂ ಪಾಂಡೆ ಹೇಳಿದ್ದಾರೆ.
ಈ ಪೋಸ್ಟ್‌ಗೆ ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ ಕಾಮೆಂಟ್ ಮಾಡಿದ್ದು, “ನಾನು ಬೆತ್ತಲಾಗಬೇಕಾ” ಎಂದು ಹೇಳಿದ್ದಾರೆ. ಪತಿಯ ಕಾಮೆಂಟ್‌ಗೆ ಪೂನಂ ಪ್ರತಿಕ್ರಿಯೆ ನೀಡಿದ್ದು, “ನೀವು ಬೆತ್ತಲಾಗಲು ಬಯಸುತ್ತೀರಾ? ಭಾರತ ಸೋತುಬಿಡತ್ತೆ” ಎಂದು ಹೇಳಿದ್ದಾರೆ. ಮದುವೆ ವಿಚಾರದಲ್ಲಿಯೂ ಪೂನಂ ವಿವಾದ ಮಾಡಿಕೊಂಡಿದ್ದರು. ಮದುವೆ ಮರು ದಿನವೇ ಈ ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕ್ವಾರಂಟೈನ್ ನಿಯಮ ವಿಚಾರದಲ್ಲಿಯೂ ಕೂಡ ಪೂನಂ ಸಾಕಷ್ಟು ವಿವಾದ ಎದುರಿಸಿದ್ದರು.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...