ಬಿಜೆಪಿ ನಕಲಿ ಮತದಾರರ ಪಟ್ಟಿ ಸೃಷ್ಟಿಸಿ ಮತ ಹಾಕಿಸಿಕೊಂಡಿದೆ: ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ

tnit editors
1 Min Read

ಬಿಜೆಪಿ ನಕಲಿ ಮತದಾರರ ಪಟ್ಟಿ ಸೃಷ್ಟಿಸಿ ಮತ ಹಾಕಿಸಿಕೊಂಡಿದೆ: ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ

ಮಡಿಕೇರಿ: ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಬಿಜೆಪಿ ನಕಲಿ ಮತದಾರರ ಪಟ್ಟಿ ಸೃಷ್ಟಿಸಿ ಮತಗಳನ್ನು ಪಡೆದುಕೊಂಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ರೀತಿಯ ಅಕ್ರಮಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿಯೂ ಕಂಡುಬರುತ್ತಿವೆ. ಚುನಾವಣಾ ಆಯೋಗವು ನಿರಪೇಕ್ಷ ನಿಲುವು ತಾಳದೆ, ಬದಲಾಗಿ ಹೊರಗಡೆ ನಿಂತು ಬೆಂಬಲ ಕೋರುತ್ತಿರುವ ಸ್ಥಿತಿಗೆ ತಲುಪಿದೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ 60 ಲಕ್ಷ ಹೊಸ ಮತದಾರರು ಪಟ್ಟಿ ಸೇರಿದ್ದರೆ, ಹರಿಯಾಣದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. “ಕಾಲಮಾನದಲ್ಲಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಅಕ್ರಮ ಮತದಾನ ನಡೆದಿದೆ,” ಎಂದು ಅವರು ದೂರು ನೀಡಿದರು.
ರಾಜಾಜೀನಗರ, ಮಹದೇವಪುರ, ಹಾಗೂ ಇನ್ನೂ ಕೆಲವು ಕ್ಷೇತ್ರಗಳಲ್ಲಿ ವಲಸಿಗರನ್ನು ದುರುಪಯೋಗ ಪಡಿಸಿ ಮತ ಹಾಕಿಸಿದ್ದಾರೆ” ಎಂದು ಅವರು ಕಪಾಳಮೋಚನ ಮಾಡಿದರು. ಕಾಂಗ್ರೆಸ್ ಗೆದ್ದಾಗ ಏಕೆ ಅಕ್ರಮ ಎಂಬ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ನಾವು 136-140 ಸ್ಥಾನ ಗೆದ್ದಿದ್ದೇವೆ, ಆದರೆ ಕೆಲವು ಕಡೆಗಳಲ್ಲಿ ಮತದಾರರ ಪಟ್ಟಿಯ ದುರುಪಯೋಗ ಬಹಳ ಗಂಭೀರವಾಗಿದೆ,” ಎಂದು ಸ್ಪಷ್ಟಪಡಿಸಿದರು.

Share This Article