ಬಿಲ್ಡರ್ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್ ರೆಡ್ಡಿ ಮನೆ ಇಡಿ ದಾಳಿ!

1 Min Read

ಆನೇಕಲ್:- ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿರುವ ಬಿಲ್ಡರ್ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ.

ಏಕಕಾಲದಲ್ಲಿ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು, ಹಲವು ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಮಹೇಂದ್ರ ಹೋಮ್ಸ್ ಮತ್ತು ಗ್ರೂಪ್ ಅಪ್ ಕಂಪನಿಗಳ ಮಾಲೀಕ ಬಿ.ಟಿ.ನಾಗರಾಜ್ ರೆಡ್ಡಿ ಅವರು ಮಾಜಿ ಎಮ್ಎಲ್ಸಿ ಬಿ.ಟಿ. ದಯಾನಂದರೆಡ್ಡಿ ಸಹೋದರ. ಕಳೆದ ಮಧ್ಯರಾತ್ರಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಕಂಪನಿಗಳು ಹಾಗೂ ಮನೆಯ ಮೇಲೆ ಅಧಿಕಾರಿಗಳ ದಾಳಿ ಮಾಡಿದೆ. ಹಲವು ದಾಖಲೆಗಳು ಮತ್ತು ನಗದು ವಶಕ್ಕೆ ಪಡೆದಿರುವ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತಿದೆ.

ಇತ್ತೀಚೆಗೆ ಬಿ.ಟಿ.ನಾಗರಾಜರೆಡ್ಡಿ ಅವರು ಮಹೇಂದ್ರ ಹೋಮ್ಸ್ ಹೆಸರಿನಲ್ಲಿ ಅಪಾರ್ಟ್ಮೆಂಟ್ ಗಳ ನಿರ್ಮಾಣ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದರು.

Share This Article