ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಸ್ನೇಹಿತನಿಂದಲೇ ಗೆಳತಿ ಮೇಲೆ ಅತ್ಯಾಚಾರ!

Date:

ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಸ್ನೇಹಿತನಿಂದಲೇ ಗೆಳತಿ ಮೇಲೆ ಅತ್ಯಾಚಾರ!

ಬೆಂಗಳೂರು: ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿ ಸಿಟಿ ಅಂತೆಲ್ಲ ಕರೆಸಿಕೊಳ್ಳುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು ಈಗ ಕ್ರೈಮ್ ಸಿಟಿಯಾಗಿ ಬದಲಾಗುತ್ತಿದೆ. ಹೆಣ್ಣು ಮಕ್ಕಳಿಗಂತೂ ಬೆಂಗಳೂರು ಸೇಫ್ ಅಲ್ಲ ಎಂಬ ಸ್ಥಿತಿ ಬಂದೊದಗಿದೆ. ಕಾರಣ ಮತ್ತೆ ಮತ್ತೆ ಆಗುತ್ತಿರೋ ಅತ್ಯಾಚಾರದಂತಹ ಮಾನಗೇಡಿ ಕೃತ್ಯಗಳು.. ಹೌದು ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಸ್ನೇಹಿತನಿಂದಲೇ ಗೆಳತಿಯ ಅತ್ಯಾಚಾರ ಆರೋಪ ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಪ್ರತಿಷ್ಟಿತ ಖಾಸಗಿ ಕಾಲೇಜು ವಿದ್ಯಾರ್ಥಿಯಿಂದ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಆರೋಪಿಯನ್ನ ಮೈಕೋ ಲೇಔಟ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೆ ಬೆಂಗಳೂರಿನ ಕೋರಮಂಗಲ ಸಮೀಪ ಇರುವ ಖಾಸಗಿ ಕಾಲೇಜು ಬಳಿ ಮಹಿಳೆಯೋರ್ವಳು ಬರುತ್ತಿದ್ದಾಗ, ಅಲ್ಲೇ ಹೋಟೆಲ್ ನಲ್ಲಿ ಕೆಲಸ ಮಾಡುವ ನಾಲ್ವರು ಸಿಬ್ಬಂದಿಗಳು ಮಹಿಳೆಯನ್ನು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಸುಮಾರು ಮಧ್ಯರಾತ್ರಿ 12:30 ಗಂಟೆಗೆ ನಡೆದಿದೆ ಎನ್ನಲಾಗಿದ್ದು, ಮದ್ಯಪಾನ ಮಾಡಿ ಖಾಸಗಿ ರೂಮಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...