ಬೆಂಗಳೂರು ನಗರದ ಕಲ್ಯಾಣ ಮಂಟಪಗಳಿಗೂ ತಟ್ಟಿದ ನೀರಿನ ಅಭಾವ..!

By
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕುಡಿಯೋ ನೀರಿಗೂ ಹಾಹಾಕಾರ ಶುರುವಾಗಿದೆ. ಇದರ ಬೆನ್ನಲ್ಲೇ ನಗರದ ಕಲ್ಯಾಣ ಮಂಟಪಗಳಿಗೂ ನೀರಿನ ಅಭಾವ ಉಂಟಾಗಿದ್ದು, ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ನೀರು ಹೊಂದಿಸಲು‌ ಕಲ್ಯಾಣ ಮಂಟಪ ಮಾಲೀಕರು ಪರದಾಡುವಂತಾಗಿದೆ. ಬುಕ್ಕಿಂಗ್ ಆಗಿರುವ ಮದುವೆಗಳಿಗೆ 20% ನೀರಿಗಾಗಿ ಕೈಯಿಂದಲೇ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ನೀರಿನ ಅಭಾವ ಹಿನ್ನಲೆ ಹೊಸದಾಗಿ ಬುಕ್ಕಿಂಗ್ ತಗೆದುಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ.
ಬುಕ್ಕಿಂಗ್ ಆದ ಮದುವೆಯನ್ನು ನಿಭಾಯಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಕಲ್ಯಾಣ ಮಂಟಪಗಳ ಮಾಲೀಕರಿದ್ದಾರೆ. ಪ್ರತಿ ಛತ್ರಗಳಲ್ಲಿಯೂ ಮದುವೆಗಾಗಿ ಬುಕಿಂಗ್ ಆಗಿವೆ. ವಿವಾಹ, ಉಪನಯನಕ್ಕೆ ಮುಂಗಡ ಕಾಯ್ದಿರಿಸಲಾಗಿದೆ. ಬಹುತೇಕ ಎಲ್ಲ ಛತ್ರಗಳ ಬೋರ್ ಹೊಂದಿವೆ. ಆದರೆ ಆ ಬೋರ್ಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ.
ಒಂದು ಮದುವೆಗೆ ಕನಿಷ್ಟ ಪಕ್ಷ 5 ಸಾವಿರ ಲೀಟರ್ ನೀರು ಬೇಕು. ಹೀಗಾಗಿ ಒಂದು ಮದುವೆಗೆ ನಾಲ್ಕೈದು ಟ್ಯಾಂಕರ್ ನೀರು ಬೇಕೆ ಬೇಕು. ಬಿಬಿಎಂಪಿ ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿದರೆ ಸಮಯಕ್ಕೆ ಟ್ಯಾಂಕರ್ ನೀರು ಬರಲ್ಲ. ಹೆಚ್ಚಿನ ಬೆಲೆಗೆ ಟ್ಯಾಂಕರ್ ನೀರು ಪಡೆಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಏಪ್ರಿಲ್, ಮೇನಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆಗಳಿವೆ. ಈಗಲೇ ಹೀಗೆ ಆದರೆ ಮುಂದೆ ಹೇಗೆ ಎಂಬ ಆತಂಕ ಕಲ್ಯಾಣ ಮಂಟಪದವರಿಗೆ ಶುರುವಾಗಿದೆ.

Share This Article