ಬೆಂಗಳೂರು ಸೇರಿದಂತೆ ಕರಾವಳಿಯ ನಗರಗಳಲ್ಲಿ ವಾಯು ಗುಣಮಟ್ಟ ಹದಗೆಟ್ಟು ಆತಂಕ

tnit editors
1 Min Read

ಬೆಂಗಳೂರು ಸೇರಿದಂತೆ ಕರಾವಳಿಯ ನಗರಗಳಲ್ಲಿ ವಾಯು ಗುಣಮಟ್ಟ ಹದಗೆಟ್ಟು ಆತಂಕ

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿ ನಗರಗಳ ವಾಯು ಗುಣಮಟ್ಟವು ಹದಗೆಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಸೂಚಿಸುತ್ತಿದೆ.

ಇಂದು ದಾಖಲಾದ ಅಂಕಿಗಳ ಪ್ರಕಾರ, ಕೆಲವು ನಗರಗಳಲ್ಲಿ ಕಳಪೆ ಹಾಗೂ ಅನಾರೋಗ್ಯಕರ ಮಟ್ಟದ ವಾಯು ಗುಣಮಟ್ಟ ಕಂಡುಬಂದಿದೆ. ಕೆಲ ದಿನಗಳ ಹಿಂದಷ್ಟೇ ತೀವ್ರ ಕಳಪೆ ಮಟ್ಟಕ್ಕಿಳಿದಿದ್ದ ಬೆಂಗಳೂರಿನ AQI ಇಂದು 175ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಉಡುಪಿಯಲ್ಲಿ 181 AQI ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಟ್ಟವಾಗಿದೆ. ಜೊತೆಗೆ ಬಳ್ಳಾರಿ ನಗರದಲ್ಲಿ 178 AQI ದಾಖಲಾಗಿದೆ.

World Health Organization (WHO) ಮಾನದಂಡಗಳ ಪ್ರಕಾರ, 150ಕ್ಕಿಂತ ಮೇಲ್ಪಟ್ಟ AQI ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಉಸಿರಾಟದ ತೊಂದರೆ, ಅಸ್ತಮಾ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI:

ಬೆಂಗಳೂರು – 175

ಮಂಗಳೂರು – 174

ಮೈಸೂರು – 177

ಬೆಳಗಾವಿ – 178

ಕಲಬುರಗಿ – 146

ಶಿವಮೊಗ್ಗ – 174

ಬಳ್ಳಾರಿ – 178

ಹುಬ್ಬಳ್ಳಿ – 153

ಉಡುಪಿ – 181

ವಿಜಯಪುರ – 144

AQI ವರ್ಗೀಕರಣ:

ಉತ್ತಮ – 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200-300

ಅಪಾಯಕಾರಿ – 300-500+

ತಜ್ಞರು ಸಲಹೆ ನೀಡಿರುವಂತೆ, ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಹೊಂದಿರುವವರು ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ತೆರಳುವುದು ಒಳಿತು. ಮಾಸ್ಕ್ ಧರಿಸುವುದು, ಮನೆಯಲ್ಲಿ ಗಾಳಿ ಶುದ್ಧೀಕರಣ ಸಾಧನಗಳನ್ನು ಬಳಸುವುದು ಹಾಗೂ ಹಸಿರು ಪರಿಸರವನ್ನು ಕಾಪಾಡುವುದು ಅವಶ್ಯಕವಾಗಿದೆ.

Share This Article