ಮಾಸ್ಕ್ ಹಾಕದವರ ಮುಖಕ್ಕೆ ಮಾಸ್ಕ್ ಬ್ಲಾಸ್ಟ್ ಮಾಡೋಕೆ ಬಂತು ಮಷೀನ್..!
ಕೊರೋನಾ ಅನ್ನೋ ಮಹಾಮಾರಿ ವಕ್ಕರಿಸಿದ್ದೇ ತಡ… ಫೇಸ್ ಮಾಸ್ಕ್ಗೆ ಡಿಮ್ಯಾಂಡೋ ಡಿಮ್ಯಾಂಡು..! ಒಂಥರಾ ಮಾಸ್ಕ್ ಅನ್ನೋದು ಕಾಮನ್ ಡ್ರಸ್ ಆಗಿ ಬಿಟ್ಟಿದೆ ..! ಮಾಸ್ಕ್ ಧರಿಸಿಕೊಳ್ಳದೆ ಯಾರೂ ಕೂಡ ಆಚೆ ಬರಲ್ಲ.. ಮಾಸ್ಕ್ ಹಾಕದವರನ್ನು ವಿಚಿತ್ರವಾಗಿ ನೋಡಲಾಗುತ್ತೆ..! ಅವರಿಂದ ಹೆಚ್ಚು ಹೆಚ್ಚು ದೂರ ಸರಿಯುತ್ತೀವಿ..! ಇಂಥಾ ಪರಿಸ್ಥಿತಿಯಲ್ಲಿ ಕೆಲವರು ಮಾಸ್ಕ್ ಬಗ್ಗೆ ಕ್ಯಾರೇ ಎನ್ನದೇ ಮಾಸ್ಕ್ ಧರಿಸಬೇಕೆಂಬ ನಿಯಮಕ್ಕೂ ಬೆಲೆ ಕೊಡದೆ ಬೇಕಾ ಬಿಟ್ಟಿ ಓಡಾಡುತ್ತಿದ್ದಾರೆ. ಅಮೆರಿಕಾದಲ್ಲಿ ಒಂದುಷ್ಟು ಮಂದಿ ಮಾಸ್ಕ್ ಪರ, ಇನ್ನೊಂದಷ್ಟು ಮಂದಿ ಮಾಸ್ಕ್ ವಿರೋಧ ಬಣವಾಗಿಯೇ ಬಿಟ್ಟಿದ್ದಾರೆ!
ನಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತು ಬೇರೆಯವರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಬೇಕಿರುವುದು ಅನಿವಾರ್ಯ.. ಸ್ವಲ್ಪ ದಿನಗಳ ಮಟ್ಟಿಗೆ ಮಾಸ್ಕ್ ಕಡ್ಡಾಯ ಧರಿಸುವುದು ಅವಶ್ಯಕ .. ಆದರೆ ಕೆಲವರ ಮೊಂಡುತನಕ್ಕೆ ಏನ್ ಮಾಡಣ ಹೇಳಿ? ಅದಕ್ಕೆ ಒಬ್ಬ ವ್ಯಕ್ತಿ ಮಾಸ್ಕ್ ಬ್ಲಾಸ್ಟ್ ಮಾಡುವ ಯಂತ್ರವನ್ನು ಪರಿಚಯಿಸಿದ್ದಾನೆ..!
ಮಷೀನ್ ಮುಂದೆ ನಿಂತ ವ್ಯಕ್ತಿ 3, 2, 1 ಎಂದು ಎಣಿಸುವಷ್ಟರಲ್ಲಿ ಮಷೀನ್ ಮುಖದ ಮೇಲೆ ಮಾಸ್ಕ್ ಬ್ಲಾಸ್ಟ್ ಮಾಡುತ್ತದೆ ..! ಮುಖಕ್ಕೆ ಅಪ್ಪಳಿಸುವ ಆ ಮಾಸ್ಕ್ ಆತನ ಮುಖದ ಮೇಲೆ ಗಟ್ಟಿಯಾಗಿ, ಸರಿಯಾದ ರೀತಿಯಲ್ಲಿ ಕೂರುತ್ತದೆ..! ಸದ್ಯ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ!
ಮಾಜಿ ಬ್ಯಾಸ್ಕೆಟ್ಬಾಲ್ ಪ್ಲೇಯರ್ ರೆಕ್ಸ್ ಚಾಪ್ಮ್ಯಾನ್ ಅವರು ಈ ವಿಡಿಯೋವನ್ನು ಹಂಚಿಕೊಂಡು, ನಮ್ಮ ಹುಡ್ಗ ಮುಖಕ್ಕೆ ಮಾಸ್ಕ್ ಧರಿಸದೇ ಓಡಾಡುವವರ ಮುಖಕ್ಕೆ ಮಾಸ್ಕ್ ಬ್ಲಾಸ್ಟ್ ಮಾಡುವ ಯಂತ್ರವೊಂದನ್ನು ಕಂಡು ಹಿಡಿದಿದ್ದಾನೆ ಎಂದು ತಿಳಿಸಿದ್ದಾರೆ.
https://twitter.com/RexChapman/status/1295374738819289091?s=20
ಧೋನಿಯ ವಿಶ್ವಕಪ್ ಸಿಕ್ಸರ್ ಗೆ ಸೂಪರ್ ಗೌರವ..!
ನಾಯಕನಾಗಿದ್ದಾಗ ಧೋನಿ ಮಾಡಿದ್ದ ರೂಲ್ಸ್ ಕೇಳಿ ಟೀಮ್ ಇಂಡಿಯಾ ಆಟಗಾರರು ಭಯ ಪಟ್ಟಿದ್ದರು..?
ಚಂದನವನಕ್ಕೆ ‘ಕಿಚ್ಚ’ನ ಕೊಟ್ಟ ‘ಹುಚ್ಚ’ಸಿನಿಮಾ ಸುದೀಪ್ ಕೈ ಸೇರಿದ್ದೇ ಇಂಟ್ರೆಸ್ಟಿಂಗ್..
ಮಕ್ಕಳ ಪೋಷಣೆಗೆ ಡ್ರೈಫ್ರೂಟ್ಸ್ ಬೆಸ್ಟ್..
ಕೆಲ ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ.. ಇಲ್ಲಿದೆ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ..
ಕೊರೋನಾದಿಂದ ಚೇತರಿಸಿಕೊಂಡಿದ್ದ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು..!
ಧೋನಿ – ರೈನಾ ಒಟ್ಟೊಟ್ಟಿಗೆ ನಿವೃತ್ತಿ ಘೋಷಿಸಿಲು ಅಸಲಿ ಕಾರಣ ಏನ್ ಗೊತ್ತಾ? 7 & 3 = 73 ..!
100 + ವಯಸ್ಸಿನ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ?
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..
ಧೋನಿ ನಿಭಾಯಿಸಿದ್ದ ಜವಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ..!
ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು.
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..
