ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

tnit editors
1 Min Read

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಬಾಗಲಕೋಟೆ: ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ  ಹೇಳಿಕೆ ಸಂಬಂಧ ಸಚಿವ ಆರ್.ಬಿ. ತಿಮ್ಮಾಪುರ್ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, “ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯವಾಗಿದ್ದು, ನಾನು ಅದನ್ನು ಹಂಚಿಕೊಳ್ಳುವಂತಿಲ್ಲ. ಮುಖ್ಯಮಂತ್ರಿಯ ಆಯ್ಕೆ ಸಿಎಲ್‌ಪಿ ಮತ್ತು ಎಐಸಿಸಿ ನಾಯಕರ ನಿರ್ಧಾರವಾಗಿರಬೇಕು ಎಂದರು.

ಸಿಎಂ ಕನಸು ಕಾಣುತ್ತಿರುವ ಡಿಕೆಶಿ ಬಗ್ಗೆ ಮಾತನಾಡಿ, ಮುಂದಿನ ಮುಖ್ಯಮಂತ್ರಿಯನ್ನು ಸಿಎಲ್‌ಪಿ‌ನಲ್ಲಿ ಪಾಸಾಗಬೇಕು ಮತ್ತು ಎಐಸಿಸಿ ನಾಯಕರು ಆಶೀರ್ವಾದ ನೀಡಬೇಕು. ಯಾರಾದರೂ ಯಾರಾಗಬೇಕು ಎಂಬುದನ್ನು ಕೇಳಬಾರದು ಎಂದರು.

ಸತೀಶ್ ಜಾರಕಿಹೊಳಿಯವರ ನಾಯಕತ್ವ ಗುಣಗಳನ್ನು ಸ್ಮರಿಸಿ, ಸತೀಶ್ ಅವರಿಗೆ ಎಲ್ಲ ಜಾತಿ-ಜನಾಂಗದವರನ್ನು ಒಟ್ಟುಗೂಡಿಸುವ ಸಾಮರ್ಥ್ಯವಿದೆ. ನಾನು ಅವರ ಶಕ್ತಿ ಬಗ್ಗೆ ಮಾತ್ರ ಹೇಳಿದ್ದು, ‘ಈ ಪರೇಡ್‌ನಲ್ಲಿ ಆಗ್ತಾರೆ’ ಎಂದು ಹೇಳಿಲ್ಲ” ಎಂದು ಹೇಳಿದರು.

Share This Article