ಯುವಕರಿಗೆ ಸ್ಫೂರ್ತಿ ತುಂಬಿದ “ಜೈ ಭೀಮ್”

admin
By admin
0 Min Read

ನಟ ಸೂರ್ಯ ಅಭಿನಯದ “ಜೈ ಭೀಮ್‌’ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಗೊಂಡು ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ಇದೀಗ ಆ ಸಿನಿಮಾದಿಂದ ಪ್ರೇರೇಪಿತರಾಗಿರುವ ಯುವಕರು ಕಾನೂನು ಪದವಿ ಪಡೆದು, ಬಡವರಿಗೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ.

ಸಿನಿಮಾದಲ್ಲಿ ವಕೀಲರಾಗಿರುವ ಸೂರ್ಯ, ಹಿಂದುಳಿದ ಜನಾಂಗದವರಿಗೆ ನ್ಯಾಯ ಒದಗಿಸಿಕೊಡುವುದನ್ನು ಕಂಡು ಅನೇಕರು ಸ್ಫೂರ್ತಿ ಪಡೆದುಕೊಂಡಿದ್ದಾರೆ.

ಅದೇ ರೀತಿ ಚೆನ್ನೈನ ಕಾಮರ್ಸ್‌ ವಿದ್ಯಾರ್ಥಿಯಾಗಿರುವ ಶ್ರವಣ್‌ ಇದೀಗ ವಕೀಲನಾಗಲು ಮುಂದಾಗಿದ್ದಾನೆ. ಮೊದಲೇ ವಕೀಲ ವೃತ್ತಿ ಬಗ್ಗೆ ಆಸಕ್ತಿ ಇತ್ತಾದರೂ ಜೈ ಭೀಮ್‌ ಸಿನಿಮಾ ನೋಡಿದ ಮೇಲೆ ಮಾಡಿದರೆ ಇದೇ ವೃತ್ತಿ ಮಾಡಬೇಕೆಂದು ನಿರ್ಧಾರ ಮಾಡಿದ್ದಾಗಿ ಆತ ಹೇಳಿದ್ದಾನೆ.

TAGGED:
Share This Article