ಲಾಕ್ ಡೌನ್ ಆಗುತ್ತಾ ಇಲ್ವಾ? ಸುಧಾಕರ್ ಹೇಳಿದ್ದಿಷ್ಟು

admin
1 Min Read

ಲಾಕ್‌ಡೌನ್‌ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂತ ಆರೋಗ್ಯ ಸಚಿವ ಆರ್‌.ಸುಧಾಕರ್‌ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಸರ್ಕಾರ ಹೇಳುವ ತನಕ ಜನತೆ ಗೊಂದಲಕ್ಕೆ ಒಳಗಾಗಬಾರದು, ಒಂದು ವೇಳೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಅಂತ ಹೇಳಿದ್ದರು. 

ಇನ್ನೂ ಕೆಲವು ಮಾಧ್ಯಮಗಳು ಲಾಕ್‌ಡೌನ್‌ ಬಗ್ಗೆ ವರದಿ ಮಾಡುತ್ತಿರುವುದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಸಚಿವರು ಹೇಳಿದ್ದಾರೆ. ಈಗಾಗಲೇ ಲಾಕ್‌ಡೌನ್‌ ಬಗ್ಗೆ ಕೆಲವು ಮಂದಿ ಸುಳ್ಳು ಸುದ್ದಿಯನ್ನು ಹರಡಿಸುತ್ತಿರುವ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಅಂತ ಹೇಳಿದರು. ಇನ್ನೂ ಈಗಾಗಲೇ ಆಗಿರುವ ಲಾಕ್‌ಡೌನ್‌ನಿಂದ ಜನತೆ ಇನ್ನಿಲ್ಲದ ರೀತಿಯಲ್ಲಿ ತೊಂದರೆ ಉಂಟು ಮಾಡಿರುವುದನ್ನು ನಾವು ಕಾಣಬಹುದಾಗಿದೆ ಸರ್ಕಾರದ ಅಧಿಕೃತ ಮಾಹಿತಿ ಬಳಿಕ ಮಾತ್ರ ಜನ ನಂಬಬೇಕು ಅಂತ ಹೇಳಿದರು. ಇದಲ್ಲದೇ ಸದ್ಯಕ್ಕೆ ಲಾಕ್‌ಡೌನ್‌ ಬಗ್ಗೆ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪ ಇಲ್ಲ ಅಂಥ ಹೇಳಿದರು.

TAGGED:
Share This Article
Leave a Comment