ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

tnit editors
1 Min Read

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಬೆಂಗಳೂರು: ನಗರದ ಬಾಗಲೂರು ವ್ಯಾಪ್ತಿಯಲ್ಲಿ ಮನೆ ಕೆಲಸದಾಕೆಯೇ ಲಿಫ್ಟ್‌ನಲ್ಲಿ ಶ್ವಾನದ ಮರಿಯನ್ನು ಬಡಿದು ಕೊಂದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆರೋಪಿ ಪುಷ್ಪಲತಾಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಶ್ವಾನದ ಮಾಲೀಕಿ ರಾಶಿಕಾ ಅವರ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಾರಂಭದಲ್ಲಿ ನಾಯಿ ಸಾವಿನ ಕುರಿತು ಪುಷ್ಪಲತಾ ಬೇರೆ ಕಥೆ ಹೇಳಿದ್ದಳು.

ಅನುಮಾನಗೊಂಡು ಸಿಸಿ ಟಿವಿ ಪರಿಶೀಲಿಸಿದಾಗ ಲಿಫ್ಟ್‌ನಲ್ಲಿ ನಾಯಿ ಮರಿಯನ್ನ ಬಡಿದು ಕೊಂದಿದ್ದು ದೃಢಪಟ್ಟಿತ್ತು. ಪುಷ್ಪಲತಾಳನ್ನು ನಾಯಿಮರಿಯ ಆರೈಕೆಗಾಗಿಯೇ ಮಾಲಕಿ ರಾಶಿಕಾ ಅವರು ನೇಮಿಸಿದ್ದರು. ಇದಕ್ಕಾಗಿ ಆಕೆಗೆ ಮಾಸಿಕ 23,000-25,000 ರೂ. ಸಂಬಳ ಕೂಡ ನೀಡುತ್ತಿದ್ದರು ಎನ್ನಲಾಗಿದೆ.

Share This Article