ಬೆಳಗಾವಿ:- ಸಂಸತ್ನಲ್ಲಿ ಭದ್ರತಾ ಲೋಪವಾದ ಹಿನ್ನೆಲೆ ಕಾಂಗ್ರೆಸ್ ಶಾಸಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಮಾತನಾಡಿದ ಹರಿಪ್ರಸಾದ್, ಈ ಹಿಂದೆ ಉಗ್ರಗಾಮಿಗಳು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು. ಹುತಾತ್ಮರಿಗೆ ಸಂತಾಪ ಸೂಚಿಸುವ ದಿನವೇ ಈ ಘಟನೆ ನಡೆದಿದೆ. ಹೊಸ ಪಾರ್ಲಿಮೆಂಟ್ ಕಟ್ಟಿದ್ದಾರೆ. ಆದರೂ ರಾಷ್ಟ್ರದ ಭದ್ರತೆ ಕುಸಿದಿದೆ. ಭದ್ರತಾ ವೈಫಲ್ಯದ ಹೊಣೆಯನ್ನ ಗೃಹ ಸಚಿವರು ಹೊರಬೇಕು. ಈ ಘಟನೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.
ಲೋಕಸಭೆಯಲ್ಲಿ ಭದ್ರತಾ ಲೋಪ: ಕೇಂದ್ರ ಸರ್ಕಾರದ ವಿರುದ್ಧ ಹರಿಪ್ರಸಾದ್ ಕಿಡಿ
