ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರದ ಅತಿಥಿ ಯಾರು? ಇವರು ಬರ್ತಾರಂತಾ ನೀವು ಊಹಿಸಿದ್ದೀರಾ?

admin
By admin
1 Min Read

ಜೀ ಕನ್ನಡ ವಾಹಿನಿಯ ಜನಪ್ರಿಯ, ಅರ್ಥಗರ್ಭಿತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಈಗ 4ನೇ ಸೀಸನ್ ಶುರುವಾಗಿದೆ.
ಮೂರು ವಾರದಲ್ಲಿ 4 ಜನ ಅತಿಥಿಗಳು ಸಾಧಕರ ಸೀಟ್ ನಲ್ಲಿ ಬಂದಿದ್ದಾರೆ‌. ಮೊದಲವಾರ ಧರ್ಮಸ್ಳಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಎರಡನೇ ವಾರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್, ಮೂರನೇ ವಾರದಲ್ಲಿ ನಟಿ ಪ್ರೇಮ ಮತ್ತು ನಟ ಪ್ರಕಾಶ್ ಬೆಳವಾಡಿ ಅತಿಥಿಗಳಾಗಿ ಬಂದಿದ್ದರು.
ಈಗ ನಾಲ್ಕನೇ ವಾರದ ಅತಿಥಿಗಳು ಯಾರು ಎನ್ನುವ ಕುತೂಹಲ ಎಲ್ಲರದ್ದು. ಜೀ ಕನ್ನಡ ವಾಹಿನಿ ಈ ವಾರದ ಅತಿಥಿಯಾರು ಎಂದು ಗೆಸ್ ಮಾಡಿ ಫೋಟೋ ಹಾಕಿದ್ದಾರೆ.
ಆ ಪ್ರಕಾರ ಸುಪ್ರೀಮ್ ಹೀರೋ ಶಶಿಕುಮಾರ್ ಮತ್ತು ಹಿರಿಯ ನಟಿ ವಿನಯ ಪ್ರಸಾದ್ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ನಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ವಿನಯ ಪ್ರಸಾದ್ ಅವರು ದಕ್ಷಿಣ ಭಾರತದ ಖ್ಯಾತ ನಟಿ.‌ ವಿಷ್ಣುವರ್ಧನ್, ಅನಂತನಾಗ್, ಅಂಬರೀಶ್, ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಗಳ ಜೊತೆ ಅಭಿನಯಿಸಿದ್ದಾರೆ.
ಅದೇರೀತಿ ಶಶಿಕುಮಾರ್ ಖಳನಾಯರಾಗಿ ಸಿನಿಮಾ ಜರ್ನಿ ಆರಂಭಿಸಿ, ನಾಯಕ ನಟನಾಗಿ ಮಿಂಚಿದವರು. 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಮಾಜಿ ಸಂಸದ ಕೂಡ ಹೌದು.

Share This Article