ಸಿನಿಮಾ ಶೂಟಿಂಗ್: ನಟನ ಕೈನಲ್ಲಿ ಗನ್, ನಂತರ ಆದದ್ದು ಕರ್ಮಕಾಂಡ!

admin
1 Min Read

ಚಲನಚಿತ್ರವೊಂದರ ಶೂಟಿಂಗ್ ವೇಳೆ ನಟ ಅಲೆಕ್ ಬಾಲ್ಡ್ವಿನ್ ಚಿತ್ರೀಕರಣಕ್ಕಾಗಿ ಬಳಸಲಾಗುತ್ತಿದ್ದ ತಮ್ಮ ಬಳಿಯಿದ್ದ ಪ್ರಾಪ್ ಗನ್‍ನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ ಪರಿಣಾಮ ಸಿನಿಛಾಯಾಗ್ರಾಹಕ ಹಲಿನಾ ಹುಚ್ಚಿನ್ಸ್ ಮೃತಪಟ್ಟರೆ ಲೇಖಕ-ನಿರ್ದೇಶಕ ಜೋಯೆಲ್ ಡಿ’ಸೋಜ ಗಾಯಗೊಂಡಿದ್ದಾರೆ.

ಬಂದೂಕಿನಲ್ಲಿ ಯಾವ ರೀತಿಯ ಮದ್ದುಗುಂಡು ಬಳಸಲಾಗಿತ್ತು ಎಂದು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ ಕೂಡಲೇ ಹಲಿನಾ ಅವರನ್ನು ನ್ಯೂ ಮೆಕ್ಸಿಕೋ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಿಲ್ಲ. ಸೋಜಾ ಅವರು ಗಂಭೀರ ಸ್ಥಿತಿಯಲ್ಲಿ ಸದ್ಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ಟ್ ಎಂಬ ಹೆಸರಿನ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು ಬಾಲ್ಡ್ವಿನ್ ಅವರು ಈ ಚಿತ್ರದ ನಿರ್ಮಾಪಕರೂ ಆಗಿದ್ದಾರೆ.

ಗುರುವಾರ ಪ್ರಕರಣದ ವಿಚಾರಣೆಗೆ ಶೆರಿಫ್ ಕಚೇರಿಗೆ ಆಗಮಿಸಿದ ಬಾಲ್ಡ್ವಿನ್ ಅವರು ಕಣ್ಣೀರು ಸುರಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

TAGGED:
Share This Article
Leave a Comment