ಹಲ್ಲಿ ಕಳ್ಳಿ ಅರೆಸ್ಟ್..! ಏನಿದು ನೀವು ಕಂಡು ಕೇಳರಿಯದ ಕಥೆ?

admin
1 Min Read

ಕಳ್ಳರನ್ನು ಪೊಲೀಸರು ಅರೆಸ್ಟ್ ಮಾಡೋದು ಕಾಮನ್. ಆದರೆ, ಹಲ್ಲಿ ಕಳ್ಳರು ಇದ್ದಾರಾ.,..? ಅವರನ್ನೂ ಅರೆಸ್ಟ್​ ಮಾಡುತ್ತಾರೆ ಎಂದರೆ ನಂಬುತ್ತೀರಾ? ಕಷ್ಟ ಆದರೂ ನಂಬಲೇ ಬೇಕು..
ಅಳಿವಿನ ಅಂಚಿನಲ್ಲಿರುವ ಜೀವಿಗಳಿಗೆ ಈಗ ತುಂಬಾ ಡಿಮ್ಯಾಂಡ್ ಇದೆ. ಅದರಲ್ಲಿ ಹಲ್ಲಿಗಳೂ ಸಹ ಒಂದಾಗಿವೆ. ಈ ಹಲ್ಲಿಗಳ ಬಗ್ಗೆ ಅನೇಕ ನಂಬಿಕೆಗಳು ಇವೆ. ಹೀಗೆ ಹಲ್ಲಿಗಳ ಮೇಲೆ ಅದೇನೋ ನಂಬಿಕೆಯೊಂದನ್ನು ಇಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ಸಾಗಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾಳೆ.

27 ವರ್ಷದ ಜಪಾನ್ ಮೂಲದ ಮಹಿಳೆ ತನ್ನ ಸೂಟ್​ಕೇಸ್​ನಲ್ಲಿ 19 ಹಲ್ಲಿಗಳನ್ನ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾಳೆ. ಆಸ್ಟ್ರೇಲಿಯಾದ ಮೇಲ್​ಬೋರ್ನ್​ನಲ್ಲಿ ಪೊಲೀಸರು ಜಪಾನಿನ ಆ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ. 17 ಶಿಂಗಲ್​​ಬ್ಯಾಕ್ ಲಿಸರ್ಡ್ ಮತ್ತು 2 ನೀಲಿ ನಾಲಗೆಯ ಹಲ್ಲಿಗಳನ್ನ ಆಕೆ ತನ್ನ ಲಗೇಜ್ ಜೊತೆ ಸಾಗಿಸುತ್ತಿದ್ದಳು. ಇದು ಎಕ್ಸ್​ರೇ ಮೆಷಿನ್​ನಲ್ಲಿ ಗೊತ್ತಾಗಿತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 10 ವರ್ಷ ಜೈಲು ಶಿಕ್ಷೆ ಆಗುವ ಸಂಭವವಿದೆ ಎಂದು ತಿಳಿದುಬಂದಿದೆ.

Share This Article
Leave a Comment