ಹೋಟೆಲ್‌ಗೆ ಬಂದು ಸಂದೇಶ್ ನಾಗರಾಜ್ ಬಳಿ ಬಯ್ಯಿಸಿಕೊಂಡ ಡಿಬಾಸ್!

Date:

ಚಂದನವನದಲ್ಲಿ ದರ್ಶನ್ ಅಂದರೆ ವಿವಾದ ವಿವಾದ ಎಂದರೆ ದರ್ಶನ್ ಎನ್ನುವ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯಮಾನಗಳು ಜರುಗುತ್ತಿವೆ. ಇತ್ತೀಚೆಗಷ್ಟೇ 25 ಕೋಟಿ ರೂಪಾಯಿಯ ವಂಚನೆ ಪ್ರಕರಣವೊಂದರಲ್ಲಿ ದರ್ಶನ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈ ವಿವಾದದಿಂದ ಹೊರಬಂದ ಬೆನ್ನಲ್ಲೇ ಇದೀಗ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದು ದರ್ಶನ್ ತಂಗಿದ್ದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವಕನಿಗೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪದ ಕುರಿತು ಇದೀಗ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನ ಮಾಲೀಕ, ಸಂದೇಶ್ ನಾಗರಾಜ್ ಅವರ ಪುತ್ರ ಸ್ಪಷ್ಟನೆಯನ್ನು ನೀಡಿದ್ದು ಹೋಟೆಲ್ ನಲ್ಲಿ ಗಲಾಟೆ ನಡೆದಿರುವುದು ನಿಜ, ಈ ಗಲಾಟೆ ನಡೆದ ವೇಳೆ ನಾನೇ ದರ್ಶನ್ ಅವರಿಗೆ ಬುದ್ಧಿ ಹೇಳಿ ರೂಮಿಗೆ ಕಳುಹಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಸಂದೇಶ್ ನಾಗರಾಜ್ ಅವರ ಪುತ್ರ ಮತ್ತು ದರ್ಶನ್ ಈ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ತನ್ನ ಹೋಟೆಲ್ ನಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿಯ ಮೇಲೆ ಯಾವುದೇ ಸ್ನೇಹಿತರು ಕೈ ಮಾಡಿದರೂ ಸಹ ನಾನು ಸುಮ್ಮನೆ ಇರುವುದಿಲ್ಲ ಅದು ದರ್ಶನ್ ಆದರೂ ಅಷ್ಟೇ ಎಂದು ಸಂದೇಶ್ ನಾಗರಾಜ್ ಅವರ ಪುತ್ರ ಹೇಳಿದ್ದಾರೆ. ಸಂದೇಶ್ ನಾಗರಾಜ್ ಪುತ್ರ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ದರ್ಶನ್ ಮತ್ತು ಸಂದೇಶ್ ನಾಗರಾಜ್ ಪುತ್ರ ಅವರ ಸ್ನೇಹ ಮುರಿದು ಬೀಳಲಿದೆಯೇ ಎಂಬ ಪ್ರಶ್ನೆ ಮೂಡಿದೆ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ ಯಾವುದೇ ಶುಭಕಾರ್ಯ ಆರಂಭಿಸುವ...