4 ಸಾವಿರ ಗಡಿದಾಟಿದ ಕೊರೊನಾ ಪ್ರಕರಣ

admin
By admin
1 Min Read

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಮರಣ ಕೇಕೆ ಹಾಕಿದ್ದು, ಒಂದೇ ದಿನ 26 ಜನರನ್ನ ಬಲಿ ಪಡೆದುಕೊಂಡಿದೆ. ಇವತ್ತು 4,225 ಪ್ರಕರಣಗಳು ವರದಿಯಾಗಿದ್ದು, 1,492 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ 9,97,004ಕ್ಕೆ ಏರಿಕೆಯಾಗಿದ್ದು, 28,248 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,567ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 266 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.89 ಮತ್ತು ಮರಣ ಪ್ರಮಾಣ ಶೇ.0.61ರಷ್ಟು ದಾಖಲಾಗಿದೆ. ಇಂದು 1,08,568 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಇಂದು ಕೂಡ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇವತ್ತಿನ ಕೇಸ್ ನಲ್ಲಿ ಬೆಂಗಳೂರಿನದ್ದೆ ಬಹುಪಾಲು ಆಗಿದೆ. ಇಂದು 2,928 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಐಸಿಯು ಪೇಷೆಂಟ್ ಗಳ ಸಂಖ್ಯೆ 266ಕ್ಕೆ ಏರಿಕೆಯಾಗಿದ್ದು, ಬೆಂಗಳೂರು ಒಂದರಲ್ಲೇ 126 ಜನ ಐಸಿಯು ಪೇಷೆಂಟ್‍ಗಳಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 68, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 80, ಬೆಂಗಳೂರು ನಗರ 2,928, ಬೀದರ್ 159, ಚಾಮರಾಜನಗರ 3, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 16, ಚಿತ್ರದುರ್ಗ 12, ದಕ್ಷಿಣ ಕನ್ನಡ 43, ದಾವಣಗೆರೆ 16, ಧಾರವಾಡ 62, ಗದಗ 14, ಹಾಸನ 74, ಹಾವೇರಿ 1, ಕಲಬುರಗಿ 137, ಕೊಡಗು 18, ಕೋಲಾರ 20, ಕೊಪ್ಪಳ 20, ಮಂಡ್ಯ 39, ಮೈಸೂರು 142, ರಾಯಚೂರು 22, ರಾಮನಗರ 6, ಶಿವಮೊಗ್ಗ 31, ತುಮಕೂರು 138, ಉಡುಪಿ 56, ಉತ್ತರ ಕನ್ನಡ 37, ವಿಜಯಪುರ 15 ಮತ್ತು ಯಾದಗಿರಿಯಲ್ಲಿ 10 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

 

Share This Article