No menu items!
11.1 C
Munich
Wednesday, April 29, 2026

ಹೆಣ್ಣೆತ್ತ ತಾಯಿಗೆ ಇವರು ತುಪ್ಪ ಕೊಡ್ತಾರೆ..! ಈ ಕುಟುಂಬದ ಪ್ರಯತ್ನದಿಂದ ಲಿಂಗಾನುಪಾತ 923ರಿಂದ 967ಕ್ಕೆ ಏರಿಕೆಯಾಗಿದೆ

Must read

ಹೆಣ್ಣು ಮಗು ಹುಟ್ಟೋದೆ ಶಾಪ ಅಂತ ತಿಳಿದ ಅವಿವೇಕಿಗಳು ಇಂದಿಗೂ ನಮ್ಮನಡುವೆ ಇದ್ದಾರೆ..! ಸರ್ಕಾರ ಹೆಣ್ಣು ಮಗುವನ್ನು ಉಳಿಸಿಕೊಳ್ಳಲು ಎಡಬಿಡದೆ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡೋದು, ಅರಿವು ಮೂಡಿಸೋದನ್ನು ಮಾಡ್ತಾ ಇದ್ರೂ ಕೆಲವರಿಗೆ ಹೆಣ್ಣೆಂದರೆ ತಾತ್ಸಾರ..! ಆದರೆ ಇಲ್ಲೊಬ್ಬ ವ್ಯಕ್ತಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಯಂದಿರಿಗೆ `ತುಪ್ಪ’ ನೀಡಿ ಪ್ರೋತ್ಸಾಹಿಸ್ತಾರೆ..!
ಅವರು ಅರವತ್ತೈದು ವರ್ಷದ ಜಿತೇಂದ್ರ ಕುಮಾರ್. ರಾಜಸ್ತಾನ್‍ದ ಪಲಿ ಜಿಲ್ಲೆಯ ಸುಮೇರ್‍ಪುರ್‍ದವರು..! ಸಮಾಜಕ್ಕೆ ಇವರದೊಂದು ಆದರ್ಶ ಕೊಡುಗೆ, ಪುಣ್ಯ ಸೇವೆ..! ಹೆಣ್ಣು ಮಕ್ಕಳಿಗೆ ಜನ್ಮ ನೀಡೋ ತಾಯಿಯಂದಿರಿಗೆ ತುಪ್ಪ ನೀಡಿ ಗೌರವಿಸ್ತಾ ಇರೋ ವಿಶೇಷ ವ್ಯಕ್ತಿ..!
ಜೀತೆಂದ್ರ ಸಿಂಗ್ ಮತ್ತು ಅವರ ಕುಟುಂಬ ಹೆಣ್ಣು ಮಗುವಿನ ಬಗ್ಗೆ ಜಾಗೃತಿ ಮೂಡಿಸೋದನ್ನು ಮಾಡ್ತಾರೆ. ಸ್ವತಃ ಮೂರು ಹೆಣ್ಣು ಮಕ್ಕಳ ತಂದೆಯಾಗಿರೋ ಜಿತೇಂದ್ರ ಹಲವು ಸಮಯದಿಂದ ಸುಮೇರ್‍ಪುರ್ ನ ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಆಗಿಂದಾಗೆ ಭೇಟಿ ನೀಡಿ ಹೆಣ್ಣೆತ್ತ ತಾಯಂದಿರಿಗೆ ತುಪ್ಪಾ ನೀಡಿ ಶುಭ ಹಾರೈಸ್ತಾರೆ.
ಜಿತೇಂದ್ರ ಸಿಂಗ್ ಮತ್ತು ಅವರ ಹೆಂಡತಿ ಸಂತೋಷ್ ದೇವಿ, ಸೋದರ ಚಂದ್ರ ಅಗರ್ವಾಲ್ ಹಾಗೂ ಅವರ ಹೆಂಡತಿ ಆಶಾ ದೇವಿಯವರ ಪ್ರಯತ್ನದಿಂದಾಗಿ 2014-15 ರಿಂದ 2015-2016 ನೇ ಅವಧಿಯಲ್ಲಿ ಪಲಿ ಜಿಲ್ಲೆಯಲ್ಲಿ ಲಿಂಗಾನುಪಾತ 923ರಿಂದ 967ಕ್ಕೆ ಏರಿಕೆಯಾಗಿದೆ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸ್ಮೃತಿ ಇರಾನಿ ಭಾಷಣಕ್ಕೆ `ಸತ್ಯಮೇವ ಜಯತೇ’ ಎಂದು ಮೋದಿ ಟ್ವೀಟ್.. !

ಕನ್ನಡ ಸಿನಿಮಾ ಉದ್ದಾರ ಆಗಬೇಕಂದ್ರೆ…..!

ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article