No menu items!
26.3 C
Munich
Thursday, June 18, 2026

ರಸ್ತೆಯ ಬದಿ ನಿಲ್ಲಿಸಿದ್ದ ಎರಡು ಕಾರು ಬೆಂಕಿಗಾಹುತಿ!

Must read

ಬೆಂಗಳೂರು:- ರಸ್ತೆಯ ಬದಿ ನಿಲ್ಲಿಸಿದ್ದ ಎರಡು ಕಾರು ಬೆಂಕಿಗೆ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ನ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಜರುಗಿದೆ. ಸುಮಾರು ಒಂಬತ್ತು ಘಂಟೆ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಸ್ತೆ ಬದಿಯಲ್ಲಿ ಕಸ ಹಾಕಲಾಗಿತ್ತು. ಕಸಕ್ಕೆ ಬಿದ್ದ ಬೆಂಕಿ ಎರಡು ಕಾರಿಗೂ ಹೊತ್ತಿಕೊಂಡಿದೆ. ಬಳಿಕ ಬೆಂಕಿಗೆ ಎರಡು ಕಾರುಗಳು ಸುಟ್ಟು ಹೋಗಿದೆ. ಸ್ಥಳಕ್ಕೆ ಬೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

- Advertisement -spot_img

More articles

- Advertisement -spot_img

Latest article