No menu items!
16.9 C
Munich
Monday, June 15, 2026

ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿರುವುದು ನಿಜವಾದರೆ ಗಲ್ಲಿಗೇರಿಸಲಿ !

Must read

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿರುವುದು ನಿಜವಾದರೆ ಗಲ್ಲಿಗೇರಿಸಲಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ ಸೋಮಣ್ಣ ಹೇಳಿದರು. ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮೊಮ್ಮಗನಾಗಿರುವ ಕಾರಣಕ್ಕೆ ರಿಯಾಯಿತಿ ತೋರುವ ಅವಶ್ಯಕತೆ ಇಲ್ಲ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ಸೋಮಣ್ಣ ಹೇಳಿದರು.
ಶಿವಕುಮಾರ್ ಅವರಿಗೆ ಕಿವಿಮಾತನ್ನು ಹೇಳಿದ ಸೋಮಣ್ಣ, ಮುಖ್ಯಮಂತ್ರಿಯಾಗುವ ಅಸೆಗಾಗಿ ದುಡುಕುವುದು ಬೇಡ, ಆತುರದಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಉಲ್ಟಾ ಹೊಡೆಯುವ ಸಾಧ್ಯತೆಗಳಿರುತ್ತವೆ, ಅವರು ಎಲ್ಲ ಕುರ್ಚಿಗಳ ಮೇಲೆ ಕೂತಾಗಿದೆ, ಒಂದು ಮಾತ್ರ ಬಾಕಿಯಿದೆ, ಅವರು ಸಿಎಂ ಆಗಲಿ ಅಂತ ನಾನೂ ಅಂದುಕೊಂಡಿದ್ದೆ ಅದರೆ ಅದನ್ನು ಪಡೆಯಲು ದುಡುಕುವುದು ಬೇಡ ಎಂದರು.

- Advertisement -spot_img

More articles

- Advertisement -spot_img

Latest article