ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

admin
By admin
2 Min Read

ಬೆಂಗಳೂರಿನ ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ ನಗರದ ಮುಖ್ಯ ರಸ್ತೆಯಲ್ಲೇ ಈ ಅವಘಡ ಸಂಭವಿಸಿದ್ದು, ಶಾಲಿನಿ ಎಂಬ ಮಹಿಳೆ ಮಧ್ಯಪಾನ ಮಾಡಿ ಅಪಘಾತ ಮಾಡಿದ್ದಾಳೆ. ನಿನ್ನೆ ರಾತ್ರಿ ತಮ್ಮಿಬ್ಬರು ಗೆಳತಿರೊಂದಿಗೆ ಹೊಂಡಾ ಸಿಟಿ ಕಾರಿನಲ್ಲಿ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಶಾಲಿನಿ ಆರ್.ಟಿ ನಗರದ ಮುಖ್ಯ ರಸ್ತೆಯಲ್ಲಿದ್ದ ಒಂದು ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಮತ್ತೆ ವೇಗವಾಗಿ ಕಾರನ್ನು ಓಡಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಇದೇ ವೇಳೆ ಅದೇ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ಫರ್ಹಾನ್ ಎಂಬಾತ ಯುವತಿಯರ ಕಾರನ್ನು ಓವರ್‍ಟೇಕ್ ಮಾಡಿ ಕಾರನ್ನು ತಡೆಯುವಲ್ಲಿ ಸಫಲರಾಗಿದ್ದಾರೆ. ಸುಮಾರು 1 ಕಿ.ಮೀ ದೂರದವರೆಗೂ ಕಾರನ್ನು ಹಿಂಬಾಲಿಸಿದ ಫರ್ಹಾನ್ ಕೊನೆಗೆ ಕಾರನ್ನು ನಿಲ್ಲಿಸಿ ಯುವತಿಯರನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪೊಲೀಸರಿಗೆ ಅಪಘಾತದ ಕುರಿತು ಮಾಹಿತಿ ನೀಡಿದ್ದ ಫರ್ಹಾನ್, ಕಾರು ಚಲಾಯಿಸುವ ವೇಳೆ ಮೂರು ಯುವತಿಯರೂ ಕಂಠ ಪೂರ್ತಿ ಕುಡಿದಿದ್ದರು ಎಂದಿದ್ದಾನೆ. ಅಲ್ಲದೇ ಅಮಲಿನಲ್ಲಿ ಆ ಯುವತಿಯರು ಕಾರಿನಲ್ಲೆ ಪರಸ್ಪರ ಚುಂಬಿಸಿಕೊಳ್ಳುತ್ತಿದ್ದರು. ಈ ವೇಳೆ ಶಾಲಿನಿ ಒಂದು ಬೈಕ್ ಹಾಗೂ ಕಾರಿಗೆ ಗುದ್ದಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ದೂರು ನೀಡಿದ್ದಾನೆ.
ಪ್ರಕರಣ ಕುರಿತಂತೆ ದೂರು ದಾಖಲಿಸಿಕೊಂಡಿರುವ ಆರ್.ಟಿ ನಗರದ ಸಂಚಾರಿ ಪೊಲೀಸರು ಮೂವರು ಯುವತಿಯರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಲಾಗಿತ್ತು. ಈ ವೇಳೆ ಕಾರು ಚಲಾಯಿಸುತ್ತಿದ್ದ ಶಾಲಿನಿ ಬಿಟ್ಟು ಉಳಿದ ಯುವತಿಯರು ಮಧ್ಯಪಾನ ಮಾಡಿದ್ದರು ಎಂದು ಮಾಹಿತಿ ನೀಡಲಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಫರ್ಹಾನ್ ತಾನು ಕಾರು ಹಿಂಬಾಲಿಸುತ್ತಿರುವಾಗ ಶಾಲಿನಿ ಮಧ್ಯ ಸೇವನೆ ಮಾಡುತ್ತಿದ್ದದ್ದು ನನ್ನ ಕಣ್ಣಾರೆ ನೋಡಿದ್ದಾಗಿಯೂ, ವೈದ್ಯರಿಗೆ ಲಂಚದಾಸೆ ನೀಡಿ ವರದಿ ಮಾರ್ಪಡಿಸಲಾಗಿದೆ ಎಂದು ಆರೋಪಿಸಿದ್ದಾನೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಅವರ ವಿರುದ್ದ ಹಿಟ್ ಅಂಡ್ ರನ್ ಕೇಸ್ ದಾಖಲಿಸಲಾಗಿದೆ.

Like us on Facebook  The New India Times

POPULAR  STORIES :

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

Share This Article