ಇಂಡಿಯಾ ಟೀಮ್ ಫಾರ್ಮರ್ ಕ್ರಿಕೆಟರ್ ಅಜರುದ್ದಿನ್ ಆಟವಾಡುವಾಗ ತನ್ನ ಕಾಲರ್ ನ ಮೇಲೆತ್ತಿ ಆಡೋದನ್ನ ನೀವೆಲ್ಲ ನೋಡಿರ್ತೀರ… ಅದು ಸ್ಟೈಲ್ ಗೆ ಇರ್ಬೇಕು ಅಂತಾ ನೀವ್ ಅಂದುಕೊಂಡಿದ್ದೀರ..? ಅದಕ್ಕೆ ಉತ್ತರವನ್ನ ಅಜರ್ ಅವರೇ ಹೇಳಿದ್ದಾರೆ… `ನಾನು ಫಿಲ್ಡಿಂಗ್ ಮಾಡೋ ಸಂದರ್ಭದಲ್ಲಿ ಸೂರ್ಯನ ಕಿರಣಗಳು ನನ್ನ ಕತ್ತಿನ ಚರ್ಮಕ್ಕೆ ಬೀಳಿದಂತೆ ನೋಡಿಕೊಳ್ಳೊಕೆ ಹೀಗೆ ಮಾಡ್ತಿದ್ದೆ.. ಯಾಕಂದ್ರೆ ನನ್ನ ಕತ್ತಿನ ಭಾಗದ ಚರ್ಮದ ಮೇಲೆ ಸೂರ್ಯನ ಕಿರಣಗಳು ಬಿದ್ರೆ ಅದರಿಂದ ಕತ್ತಿನ ಭಾಗದಲ್ಲಿ ತೊಂದರೆ ಉಂಟಾಗುತ್ತಿತ್ತು..
ಹೀಗಾಗೆ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳೋಕೆ ಹೀಗೆ ಮಾಡ್ತಿದ್ದೆ” ಅಂದಿದ್ದಾರೆ.. ಆನಂತರ ಇದೆ ನನಗೆ ರೂಢಿಯಾಗಿ ಹೋಯ್ತು ಅಷ್ಟೇ ಅಂದಿದ್ದಾರೆ,.. ಜೊತೆಗೆ ತಾನೂ ಬ್ಯಾಟಿಂಗ್ ಗೆ ಇಳಿದ ಸಂದರ್ಭದಲ್ಲಿ ವೈಟ್ ಹೆಲ್ಮೆಟ್ ನ ಬಳಸೋದ್ರ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.. ನನಗೆ ಬಿಳಿ ಬಣ್ಣವೆಂದ್ರೆ ತುಂಬಾ ಇಷ್ಟ ಜೊತೆಗೆ ಟೆಸ್ಟ್ ಮ್ಯಾಚ್ ಆಡೋ ಸಂದರ್ಭದಲ್ಲಿ ಹೆಚ್ಚಾಗಿ ಬಿಳಿ ಬಣ್ಣದ ಹೆಲ್ಮೆಟ್ ಬಳಸ್ತಿದ್ದೆ.. ಹೀಗಾಗೆ ಏಕದಿನ ಪಂದ್ಯಗಳ ಸಂದರ್ಭದಲ್ಲೂ ಅದನ್ನೆ ನಾನು ಮುಂದುವರೆಸಿದ್ದೆ.. ಯಾಕಂದ್ರೆ ಆಗ ಬ್ಲೂ ಹೆಲ್ಮೆಟ್ ಬಳಸಬೇಕು ಅನ್ನೋ ನಿಯಮ ಕಡ್ಡಾಯವಾಗಿರಲಿಲ್ಲ ಅಂತಾ ತನ್ನ ಸ್ಟೈಲ್ ಬಗೆಗಿನ ಗುಟ್ಟನ್ನ ಬಿಚ್ಚಿಟ್ಟಿದ್ದಾರೆ..
- ಅಶೋಕ
POPULAR STORIES :
400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?