ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಮಂಗಳೂರಲ್ಲಿ ಜಾಲಿಮೂಡಲ್ಲಿ ಇದ್ದಾರೆ.
ತಾನು ಓದಿದ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಚಂದನ್ ನಿನ್ನೆ ಪಾಲ್ಗೊಂಡಿದ್ದರು. ಇಂದು ಮಂಗಳೂರಿನ ಪಣಂಬೂರ್ ಬೀಚ್ ನಲ್ಲಿ ಚಂದನ್ ಎಂಜಾಯ್ ಮಾಡಿದ್ದಾರೆ. ಅಲ್ಲಿಯೇ ಗೆಳೆಯ ಪುನಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಬೋಟಿಂಗ್ , ಸ್ಪೀಡ್ ಬೈಕ್ ರೈಡ್ ಮಾಡಿ ಸಂಭ್ರಮಿಸಿದ್ದಾರೆ. ಚಂದನ್ ಅವರ ಎಫ್ ಬಿ ಲೈವ್ ನೋಡಿದ ಅಭಿಮಾನಿಗಳು ಬೀಚ್ ಬಳಿ ದೌಡಾಯಿಸಿ ಚಂದನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
Happy birthday Puni ????
Posted by Chandan Shetty on Tuesday, February 27, 2018